ನಂದಿನಿ ಪಾರ್ಲರ್​ನಲ್ಲಿ ತಂಬಾಕು ಉತ್ಪನ್ನ ಮಾರಾಟ

 ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಸೇಡಂ ತಹಸಿಲ್​ ಕಚೇರಿ ಆವರಣದಲ್ಲಿನ ನಂದಿನಿ ಮಿಲ್ಕ್​ ಪಾರ್ಲರ್​ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದರು. ಡಾ.ಸಂಜು ಪಾಟೀಲ್​, ಮಲ್ಲಿಕಾರ್ಜುನ, ಪ್ರೀತಿ, ಮಹಾಂತೇಶ, ಮರೆಪ್ಪ ಇದ್ದರು.
ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಸೇಡಂ ತಹಸಿಲ್​ ಕಚೇರಿ ಆವರಣದಲ್ಲಿನ ನಂದಿನಿ ಮಿಲ್ಕ್​ ಪಾರ್ಲರ್​ ಮೇಲೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದರು. ಡಾ.ಸಂಜು ಪಾಟೀಲ್​, ಮಲ್ಲಿಕಾರ್ಜುನ, ಪ್ರೀತಿ, ಮಹಾಂತೇಶ, ಮರೆಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಅಧಿಕಾರಿಗಳಿಂದ ದಿಢೀರ್​ ದಾಳಿ
  • ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ
ಸೇಡಂ: ತಹಸಿಲ್​ ಕಚೇರಿ ಆವರಣದಲ್ಲಿರುವ ನಂದಿನಿ ಮಿಲ್ಕ್​ ಪಾರ್ಲರ್​ನಲ್ಲಿ ಅನಧಿಕೃತವಾಗಿ ಗುಟ್ಖಾ, ಸಿಗರೇಟ್​ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ ಸಾಕಷ್ಟು ಪ್ರಮಾಣದ ಗುಟ್ಖಾ, ಸಿಗರೇಟ್​ ವಶಕ್ಕೆ ಪಡೆದಿದೆ.
ಸರ್ಕಾರವು ತನ್ನ ಸ್ವಾಯತ್ತ ಸಂಸ್ಥೆಯಾದ ನಂದಿನಿ ಉತ್ಪನ್ನಗಳ ಮಾರಾಟದ ಉದ್ದೇಶಕ್ಕಾಗಿ ಸರ್ಕಾರಿ ಕಚೇರಿ ಆವರಣದಲ್ಲಿ ಅಂಗಡಿ ಸ್ಥಾಪಿಸಲು ಅನುಮತಿ ನೀಡಿದೆ. ಆದರೆ ಹೆಸರಿಗಷ್ಟೆ ನಂದಿನಿ ಪಾರ್ಲರ್​ ಆಗಿದ್ದು, ಗುಟ್ಖಾ, ಸಿಗರೇಟ್​, ಉಪಾಹಾರ ಮಾರಾಟ ಜೋರಾಗಿ ನಡೆಸಲಾಗುತ್ತಿತ್ತು.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲಿಸಿದ್ದು, ಪ್ರಥಮವಾಗಿ ದಂಡ ವಿಧಿಸಿ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮಾಡಬಾರದು. ಅದರಲ್ಲಿಯು ನಂದಿನಿ ಪಾರ್ಲರ್​ನಲ್ಲಿ ತಂಬಾಕು ಉತ್ಪನ್ನ ಮಾರಾಟ ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜು ಪಾಟೀಲ್​, ನಗರಸಭೆ ಹಿರಿಯ ನೈರ್ಮಲ್ಯ ನಿರೀಕ್ಷಕ ಮಲ್ಲಿಕಾರ್ಜುನ ಪಾಟೀಲ್​, ೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರೀತಿ, ಎಸ್​ಟಿಎಸ್​ನ ಮಹಾಂತೇಶ, ಮರೆಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net