ಮೃತನ ಹೆಸರಲ್ಲಿ ಜಮೀನು ಮಾರಾಟ

Arrest
Arrest
Published on

ಬೆಳಗಾವಿ: ಮಾಲೀಕನ ಮರಣದ ನಂತರ ತಾನೇ ಮಾಲೀಕನೆಂದು ಜಮೀನು ಮಾರಿದ ಪ್ರಕರಣದಲ್ಲಿ ಮಾರ್ಕೆಟ್ ಠಾಣೆ ಪೊಲೀಸರು ಬಾಳೇಕುಂದ್ರಿ ಕೆಎಚ್ ಗ್ರಾಮದ ವಿಷ್ಣು ಪಾಟೀಲ(67)ನನ್ನು ಬಂಧಿಸಿದ್ದಾರೆ.

ದುಂಡಯ್ಯ ಪೂಜಾರಿ ಹೆಸರಿನಲ್ಲಿ ಹೊನ್ನಿಹಾಳ ಗ್ರಾಮದಲ್ಲಿ 35 ಗುಂಟೆ ಜಮೀನಿತ್ತು. ಹಲವು ವರ್ಷಗಳ ಹಿಂದೆ ಅವರು ಮೃತಪಟ್ಟಿದ್ದರು. ತಾನೇ ದುಂಡಯ್ಯ ಎಂದು ವಿಷ್ಣು ನಕಲಿ ಸಹಿ
ಮಾಡಿ 2024ರ ಏ.8ರಂದು ದಕ್ಷಿಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಖರೀದಿ ಪತ್ರ ಮಾಡಿ ಮಾರಾಟ ಮಾಡಿದ್ದ ಬಗ್ಗೆ ಮಾರ್ಕೆಟ್ ಠಾಣೆಯಲ್ಲಿ ಮೃತನ ಮೊಮ್ಮಗ ಬಸಯ್ಯ ದೂರು ದಾಖಲಿಸಿದ್ದರು.
ಮದ್ಯಸೇವನೆ: ಅನಗೋಳ ಮರಾಠಿ ಶಾಲೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಕುರುಬರಗಲ್ಲಿಯ ಶುಭಂ ಮುತಗೇಕರ(45), ಸಿದ್ದಪ್ಪ ಸನದಿ(29), ರಘುನಾಥ ಪೇಟೆಯ ಬಾಗಣ್ಣ ಮಲತವಾಡಿ(39) ವಿರುದ್ಧ ಟಿಳಕವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೊಬೈಲ್ ಹಸ್ತಾಂತರ: ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ
123 ಮೊಬೈಲ್‌ಗಳನ್ನು ಪತ್ತೆ ಮಾಡಿ, ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net