ಸಾಬಣ್ಣ ಸಿಎಂ ಮನೋಜ್ ಡಿಸಿಎಂ

ದೋರನಹಳ್ಳಿ ೦೧ ದೋರನಹಳ್ಳಿ ಪಿಎಂಶ್ರೀ ಕೆಪಿಎಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ವೇಳೆ ಮಕ್ಕಳು ಸಾಲಾಗಿ ಬಂದು ಮತದಾನ ಮಾಡುತ್ತಿರುವುದು.
ದೋರನಹಳ್ಳಿ ೦೧ ದೋರನಹಳ್ಳಿ ಪಿಎಂಶ್ರೀ ಕೆಪಿಎಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ವೇಳೆ ಮಕ್ಕಳು ಸಾಲಾಗಿ ಬಂದು ಮತದಾನ ಮಾಡುತ್ತಿರುವುದು.
Published on
ದೋರನಹಳ್ಳಿ : ಇಲ್ಲಿನ ಪಿಎಂಶ್ರೀ ಕೆಪಿಎಸ್ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಸಾಬಣ್ಣ ಮುಖ್ಯಮಂತ್ರಿ ಮತ್ತು ಮನೋಜ್ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದು, ಶಾಲಾ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪ್ರಮಾಣ ವಚನ ಸ್ವೀಕರಿಸಿದರು.
ಮಕ್ಕಳಲ್ಲಿ ಪ್ರಾಥಮಿಕ ಹಂತದಿAದಲೇ ಮತದಾನದ ಜಾಗೃತಿ ಬರಲಿ ಎಂಬ ಏಕೈಕ ಉದ್ದೇಶದಿಂದ ಚುನವಣಾ ಆಯೋಗದಂತೆ ಚುನಾವಣೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಈ ಚುನಾವಣೆ ನಡೆಯಿತು.
ಶುಕ್ರವಾರ ಮತ್ತು ಶನಿವಾರ ಎರಡು ದಿನ ಚುನಾವಣಾ ಪ್ರಕ್ರಿಯೆ ನಡೆಸಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಚುನಾವಣಾ ನಿಯಮ ತಿಳಿಯುವಂತೆ ಕ್ರಮ ವಹಿಸಲಾಗಿದೆ. ಶುಕ್ರವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಸಿಂಧು, ಅಸಿಂಧು ಹಿಂಪಡೆಯುವ ಪ್ರಕ್ರಿಯೆ ನಡೆಸಲಾಯಿತು. ನಂತರ ಕಣದಲ್ಲಿ ಉಳಿದ ವಿದ್ಯಾರ್ಥಿ ಅಭ್ಯರ್ಥಿಗಳು ತರಗತಿವಾರು ಓಡಾಡಿ ಪ್ರಚಾರ ನಡೆಸಿದರು. ಈ ವೇಳೆ ವಿದ್ಯಾರ್ಥಿ ಅಭ್ಯರ್ಥಿಗಳು ಶಾಲಾ ಚಟುವಟಿಕೆ, ಅಭೀವೃದ್ಧಿಯ ಕುರಿತು ಪ್ರಚಾರದಲ್ಲಿ ಪ್ರಣಾಳಿಕೆಯನ್ನು ಬರೆದು ಭರವಸೆ ನೀಡಿ ಮತದಾನ ಮಾಡುವಂತೆ ಮನವಿ ಮಾಡಿದರು. ಶುಕ್ರವಾರ ಮಧ್ಯಾಹ್ನ ಮತದಾನ ನಡೆಯಿತು.
ಪಿಆರ್‌ಒ ಆಗಿ ಮುಖ್ಯಗುರು ಸಿದ್ದಪ್ಪ ಸಿಂಘೆ, ಎಪಿಆರ್‌ಒ ಆಗಿ ಸಹ ಶಿಕ್ಷಕಿ ರೇಷ್ಮಾ, ಪಿಒ ಆಗಿ ಶಿಕ್ಷಕಿ ನೀಲಮ್ಮ ಮತ್ತು ಶಿವಲೀಲಾ, ನಿರ್ವಹಣಾ ಅಽಕಾರಿಗಳಾಗಿ ಶಿಕ್ಷಕಿ ಉಮಾರಾಣಿ, ಶಿಕ್ಷಕ ಅನಿಲ್‌ಕುಮಾರ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಸರತಿಯಲ್ಲಿ ಬಂದು ತಮ್ಮ ತಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಇವಿಂಎA ಬ್ಯಾಲೇಟ್ ಲಾಕ್ ಮಾಡಿ ಶನಿವಾರ ಬೆಳಗ್ಗೆ ಮತ ಎಣಿಕೆ ಮಾಡಿ ಗೆದ್ದ ಅಭ್ಯರ್ಥಿಗಳ ಘೋಷಣೆ ಮಾಡಲಾಯಿತು.
ಶಾಲಾ ಸಂಸತ್‌ನ ವಿದ್ಯಾರ್ಥಿ ಅಭ್ಯರ್ಥಿಗಳಾದ ಸಾಬಣ್ಣ, ಮನೋಜ, ಶಿವರಾಜ, ವಾಣಿಶ್ರೀ, ಪ್ರಾರ್ಥನಾ, ಭಾಗ್ಯಶ್ರೀ, ಶರಣಮ್ಮ, ಮಾಲಾಶ್ರೀ, ಮನೋಜ, -Àಯಾಜ್ ಗೆಲುವು ಸಾಽಸಿ ಪದಾಽಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಸಾಬಣ್ಣ, ಉಪಮುಖ್ಯಮಂತ್ರಿಯಾಗಿ ಮನೋಜ್ ಆಯ್ಕೆಯಾಗಿ ಇತರರಿಗೆ ಇತರೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಯಿತು. ನಂತರ ಎಲ್ಲ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಈ ವೇಳೆ ಮುಖ್ಯಗುರು ಸಿದ್ದಪ್ಪ ಸಿಂಘೆ, ಭೋದನಾ ಸಿಬ್ಬಂದಿ ಅನಿಲ್‌ಕುಮಾರ, ನೀಲಮ್ಮ, ಉಮಾರಾಣಿ, ರೇಷ್ಮಾ, ಶೀಲಾ, ಶಿಲ್ಪಾ, ಶಿವಲೀಲಾ, ಪ್ರೀಯಾಂಕ ಹಾಗೂ ಅತಿಥಿ ಶಿಕ್ಷಕ ವೃಂದದವರಾದ ಚಂದ್ರಶೇಖರ, ಸಂಗಣ್ಣ, ಶಿವಲೀಲಾ, ರೇಣುಕಾ, ಶಕುಂತಲಾ, ಸುಷ್ಮಾ, ಭಾಗೀರಥಿ, ಶ್ವೇತಾ, ಮಹಾಲಕ್ಷ್ಮೀ, ವಿಜಯಲಕ್ಷ್ಮೀ ಮತ್ತು ಗ್ರಂಥಪಾಲಕರಾದ ಹಯ್ಯಾಳಪ್ಪ ಗುಂಟನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net