ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಉದ್ಘಾಟಿಸಿದರು. ಸಂಗೀತ ಕಲಾವಿದರಾದ ವೀರುಪಾಕ್ಷ ಹೂಗಾರ, ರಮೇಶ ಕಟ್ಟಿಮನಿ, ನರಸಿಂಹ ಬಾಡಿಯಾಳ, ಶ್ರೀಪಾದ ಭಟ್ಟ, ಶಿಲ್ಪಾ ಪಾಟೀಲï, ರಾಜೇಶ ಮಸ್ಕಿ, ಸಿದ್ದರಾಜ ಕೆ, ಮಹೇಶ ಜಾಗೀರದಾರ್, ಶರಣು ಮೊಗಲಿ, ಶಿವು ಮಂಗಿಹಾಳ, ಸುರೇಶ, ಕಿರಣ, ಶರಣು, ಕೀರಲಿಂಗಪ್ಪ ಹಾಗೂ ಅನ್ನಪೂರ್ಣ ಅವರು ಚಿನ್ನದ ಮಲ್ಲಿಗೆ ಹೂವೇ, ಸುಖದ ಸ್ವಪ್ನಗಾನಾ, ನನ್ನಾಸೆಯಾ ಹೂವೆ.. ಬೆಳದಿಂಗಳಾ ಚೆಲುವೆ, ಯಾರಿವನು ಈ ಮನ್ಮಥನು.. ಸೇರಿದಂತೆ ಹಲವು ಜನಪ್ರಿಯ ಗೀತೆಗಳನ್ನು ಹಾಡಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.