ಬಾಗೇಪಲ್ಲಿಯಲ್ಲಿ ರಷ್ಯಾ ಮೂಲದ ವ್ಯಕ್ತಿ ರಕ್ಷಣೆ

Russian national rescued in Bagepalli
Russian national rescued in Bagepalli
Published on

ಬಾಗೇಪಲ್ಲಿ:

ಪಟ್ಟಣ ಹೊರವಲಯದ ರ್ನಿಜನ ಪ್ರದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ರಷ್ಯಾ ಮೂಲದ ವ್ಯಕ್ತಿಯನ್ನು ಸಾರ್ವಜನಿಕರು ಗುರುವಾರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿನ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.

ಎಡ್ವರ್ಡ್​ಗೆ ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದೇವೆ.

— ಡಾ.ಸಿ.ಎನ್​.ಸತ್ಯನಾರಾಯಣರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಬಾಗೇಪಲ್ಲಿ

ಈತ ರಷ್ಯಾ ಮೂಲದ ಎಡ್ವರ್ಡ್​ ಎಂದು ಗೊತ್ತಾಗಿದ್ದು, ಪ್ರಸ್ತುತ ಗೋವಾದಲ್ಲಿ ವಾಸಿಸುತ್ತಿರುವುದಾಗಿ ಆಸ್ಪತ್ರೆ ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾನೆ. ಗೋವಾದಲ್ಲಿ ವಾಸವಿರುವ ರಷ್ಯಾ ಪ್ರಜೆ ಎಡ್ವರ್ಡ್​ ಬಾಗೇಪಲ್ಲಿಗೆ ಹೇಗೆ ಬಂದರು ಎಂಬುದು ಗೊತ್ತಾಗಿಲ್ಲ. ಇತ್ತೀಚೆಗೆ ತಿಂಗಳ ಹಿಂದೆಯಷ್ಟೇ ಎಸ್​ಐಆರ್​ ಪ್ರಕ್ರಿಯೆ ವೇಳೆ ಪಾಕಿಸ್ತಾನ ಮೂಲದ ಪ್ರಜೆ ತಾಲೂಕಿನ ದಾಸಯ್ಯಗಾರಿಪಲ್ಲಿ ಬಳಿ ಪತ್ತೆಯಾಗಿದ್ದನು. ಈ ಪ್ರಕರಣ ಮಾಸುವ ಮುನ್ನವೇ ರಷ್ಯಾ ಪ್ರಜೆ ಅನುಮಾಸ್ಪದ ಸ್ಥಿತಿಯಲ್ಲಿ ಬಾಗೇಪಲ್ಲಿಯಲ್ಲಿ ಸಿಕ್ಕಿದ್ದಾನೆ.
ತಾಲೂಕು ವ್ಯಾಪ್ತಿಯಲ್ಲಿ ಬೇರೆ ದೇಶದ ಪೌರತ್ವ ಹೊಂದಿರುವ ಪ್ರಜೆಗಳು ಕಂಡುಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಹುಟ್ಟಿಸಿದೆ. ಬಾಗೇಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net