ರೈತರ ನೆರವಿಗೆ ಕೂಡಲೇ ಧಾವಿಸಿ

ಯಾದಗಿರಿಯಲ್ಲಿನ ಕೃಷಿ ಇಲಾಖೆಗೆ ಸೋಮವಾರ ಭೇಟಿ ನೀಡಿದ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರಡ್ಡಿ ಮುದ್ನಾಳ್​ ನೇತೃತ್ವದ ತಂಡ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಅವರಿಗೆ ಮನವಿ ಸಲ್ಲಿಸಿ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆ ಬಗೆಹಿಸುವಂತೆಯೇ ಒತ್ತಾಯಿಸಿತು. ಶರಣಗೌಡ ಬಾಡಿಯಾಳ, ರಾಜಶೇಖರ ವಡಿಗೇರಾ, ಬಸರೆಡ್ಡಿಗೌಡ ಕುರಕುಂದಿ, ಬಸವರಾಜ ಸಾಹುಕಾರ, ರಾಜಶೇಖರ ಕಾಡಮಗೇರಿ ಇತರರಿದ್ದರು.
ಯಾದಗಿರಿಯಲ್ಲಿನ ಕೃಷಿ ಇಲಾಖೆಗೆ ಸೋಮವಾರ ಭೇಟಿ ನೀಡಿದ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶರಡ್ಡಿ ಮುದ್ನಾಳ್​ ನೇತೃತ್ವದ ತಂಡ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಅವರಿಗೆ ಮನವಿ ಸಲ್ಲಿಸಿ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆ ಬಗೆಹಿಸುವಂತೆಯೇ ಒತ್ತಾಯಿಸಿತು. ಶರಣಗೌಡ ಬಾಡಿಯಾಳ, ರಾಜಶೇಖರ ವಡಿಗೇರಾ, ಬಸರೆಡ್ಡಿಗೌಡ ಕುರಕುಂದಿ, ಬಸವರಾಜ ಸಾಹುಕಾರ, ರಾಜಶೇಖರ ಕಾಡಮಗೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹೇಶರೆಡ್ಡಿ ಮುದ್ನಾಳ ಆಗ್ರಹ
  • ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ರೈತರ ನೆರವಿಗೆ ಕೂಡಲೇ ಧಾವಿಸಿ
ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಈ ವೇಳೆ ರೈತರಿಗೆ ಬೀಜ ಮತ್ತು ರಸಗೊಬ್ಬರದ ಅಭಾವ ಆಗದಂತೆ ವ್ಯವಸ್ಥೆ ಮಾಡಿ, ಈ ನಿಟ್ಟಿನಲ್ಲಿ ರೈತರ ನೆರವಿಗೆ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಕೂಡಲೇ ಬರಬೇಕು ಎಂದು ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ ಆಗ್ರಹಿಸಿದ್ದಾರೆ.
ಸೋಮವಾರ ಜಿಲ್ಲೆಯ ಅದರಲ್ಲೂ ಯಾದಗಿರಿ ಮತಕ್ಷೇತ್ರ ಅನೇಕ ರೈತರೊಂದಿಗೆ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ ಅಲ್ಲಿದ್ದ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರು ಅವರೊಂದಿಗೆ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸೂಧೀರ್ವಾಗಿ ಚರ್ಚಿಸಿದರು. ಈ ವೇಳೆ ರೈತರ ಆರ್ತನಾದವನ್ನು ಸೂಗುರು ಅವರಿಗೆ ಹೇಳಿದ ಅವರು, ರಸಗೊಬ್ಬುರ ನೀಡುವಲ್ಲಿ ತಾರತಮ್ಯವಾಗುತ್ತಿದೆ, 10 ಎಕರೆ ಜಮೀನಿಗೆ ಆಗುವಷ್ಟು ರಸಗೊಬ್ಬುರ ನೀಡುವುದಾಗಿ ಹೇಳಿದರೇ ದೊಡ್ಡ, ದೊಡ್ಡ ರೈತರು ಬೇಕಾದಷ್ಟು ರಸಗೊಬ್ಬುರ ಎಲ್ಲಿಂದ ತರಬೇಕು. ಮಾರಾಟಗಾರರಲ್ಲಿ ಬೇಕಾದಷ್ಟು ಇಲ್ಲದಿದ್ದರೇ ಕೃಷಿ ಇಲಾಖೆಯವರು ಪ್ರಕಟಣೆ ಹೊರಡಿಸಿ ಹೇಳಲಿ, ಅಗತ್ಯ ರಸಗೊಬ್ಬುರ ಸಂಗ್ರಹವಿಲ್ಲ. ಕಾರಣ ರೈತರು ನೋಡಿಕೊಂಡು ಬಿತ್ತನೆ ಮಾಡಿ ಎಂದು ಹೇಳಿದರೇ ಅವರವರ ಇಷ್ಟದಂತೆಯೇ ಕೃಷಿ ಕಾಯಕ ಮಾಡುತ್ತಾರೆ.
ಸುಮ್ಮನೇ ಈ ರೀತಿ ತೊಂದರೆ ನೀಡುವುದು ಬೇಡ ಎಂದು ಮಹೇಶರೆಡ್ಡಿ ಹೇಳಿದರು. ಎಲ್ಲವನ್ನು ಆಲಿಸಿದ ಸೂಗುರು ಅವರು, ಈ ಬಗ್ಗೆ ಸೂಕ್ರಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.ಈ ವೇಳೆ ಪಕ್ಷದ ಮುಖಂಡರಾದ ಶರಣಗೌಡ ಬಾಡಿಯಾಳ, ರಾಜಶೇಖರ ವಡಿಗೇರಾ, ಬಸರೆಡ್ಡಿಗೌಡ ಕುರಕುಂದಿ, ಬಸವರಾಜ ಸಾಹುಕಾರ, ರಾಜಶೇಖರ ಕಾಡಮಗೇರಿ, ಪರಶುರಾಮ ಕುರುಕುಂದಿ, ಸ್ವಾಮಿದೇವ ದಾಸನಕೇರಿ, ಶರಣಗೌಡ ಹಬ್ಬಳ್ಳಿ, ಸುರೇಶ ಸಾಹುಕಾರ, ಗೋವಿಂದಪ್ಪ ಕೊಂಚಟ್ಟಿ, ನಾಗಶೆಟ್ಟಿ ಅಂಗಡಿ, ನಾಗರೆಡ್ಡಿ ಇಬ್ರಾಹಿಂಪುರ, ಭೀಮರಾಯ ಹೊಸ್ಮನಿ ಇತರರಿದ್ದರು.
ಗಿರಿಜಿಲ್ಲೆಯ ವಿದ್ಯುತ್​ ಸಮಸ್ಯೆ ಬಗೆಹರಿಸಿ
ಯಾದಗಿರಿ: ನಗರ ಸೇರಿ ಜಿಲ್ಲೆಯಲ್ಲಿ ವಿದ್ಯುತ್​ ಸಮಸ್ಯೆ ತೀವ್ರವಾಗಿದ್ದು, ಹಳ್ಳಿಗಳಲ್ಲಿ 2&3ದಿನಗಳವರೆಗೆ ಕರೆಂಟ್​ ಇರುವುದಿಲ್ಲ. ರೈತರಿಗೆ ಸಮರ್ಪಕವಾಗಿ 7 ತಾಸು ವಿದ್ಯುತ್​ ಸರಬರಾಜು ಮಾಡಬೇಕು, ಅವರಿಗೆ ಅನುಕೂಲವಾಗುವ ಸಮಯದಲ್ಲಿ ಇದನ್ನು ಒದಗಿಸಬೇಕು ಎಂಬುದು ಸೇರಿ ಜಿಲ್ಲೆಯಲ್ಲಿ ಜೆಸ್ಕಾಂ ಇಲಾಖೆಯಿಂದ ಆಗುತ್ತಿರುವ ಸಮಸ್ಯೆ ಕೂಡಲೇ ಬಗೆಹರಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ ನೇತೃತ್ವದ ತಂಡ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕರೆರಾ ಅವರನ್ನು ಒತ್ತಾಯಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಅವರನ್ನು ಭೇಟಿ ಮಾಡಿ ಸನ್ಮಾನಿಸಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಮನವಿ ಸಲ್ಲಿಸಿದರು. ಹಳ್ಳಿಗಳಲ್ಲಿ ರೈತರಿಗೆ ನಡುರಾತ್ರಿಯಲ್ಲಿ ಕರೆಂಟ್​ ನೀಡಿದರೆ ಅವರು ನೀರು ಹೇಗೆ ಪಡೆಯಬೇಕು, ಕಾರಣ ಅವರಿಗೆ ಅನುಕೂಲವಾಗುವಂತೆಯೇ ವ್ಯವಸ್ಥೆ ಮಾಡಬೇಕು, ಸ್ವಲ್ಪ ಗಾಳಿ, ಮಳೆ ಬಂದರೆ ತಾಸು ಗಟ್ಟಲ್ಲೇ ವಿದ್ಯುತ್​ ಹೊಗುತ್ತದೆ, ಇದು ತಪ್ಪಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಿದ್ದಣಗೌಡ ವಡಗೇರಾ, ನಗರಮಂಡಲ ಅಧ್ಯ ಲಿಂಗಪ್ಪ ಹತ್ತಿಮನಿ, ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡಮನಿ, ಸಿದ್ದಣ್ಣಗೌಡ ತಂಗಡಗಿ, ವಿಲಾಸ್​ ಪಾಟೀಲ್​, ಸ್ವಾಮಿದೇವ ದಾಸನಕೇರಿ, ಗೋವಿಂದಪ್ಪ ಕೊಂಚಟ್ಟಿ, ಲ್ಮಮಿಪುತ್ರ ಮಾಲಿ ಪಾಟೀಲ್​, ಮಹಾವೀರ ಲಿಂಗೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net