ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ / ANEKAL

ಆನೇಕಲ್​ ಎಎಸ್​ಬಿ ಆಟದ ಮೈದಾನದಲ್ಲಿ ಆಯೋಜಿಸಿದ್ದ ಯುವಜನೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಟ ಧನ್ವಿರ್​, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್​ ಉಪಾಧ್ಯಕ್ಷೆ ಎಚ್​.ಆರ್​.ದೀಪಿಕಾ ರೆಡ್ಡಿ, ಜಿಕೆವಿಕೆ ನಿರ್ದೇಶಕ ಉಲ್ಲಾಸ್​ ಶಿವಣ್ಣ, ಕಾಂಗ್ರೆಸ್​ ಎಸ್ಸಿ ಘಟಕದ ಬ್ಲಾಕ್​ ಅಧ್ಯಕ್ಷ ಮದ್ದೂರಪ್ಪ ಇದ್ದರು.
ಆನೇಕಲ್​ ಎಎಸ್​ಬಿ ಆಟದ ಮೈದಾನದಲ್ಲಿ ಆಯೋಜಿಸಿದ್ದ ಯುವಜನೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಟ ಧನ್ವಿರ್​, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್​ ಉಪಾಧ್ಯಕ್ಷೆ ಎಚ್​.ಆರ್​.ದೀಪಿಕಾ ರೆಡ್ಡಿ, ಜಿಕೆವಿಕೆ ನಿರ್ದೇಶಕ ಉಲ್ಲಾಸ್​ ಶಿವಣ್ಣ, ಕಾಂಗ್ರೆಸ್​ ಎಸ್ಸಿ ಘಟಕದ ಬ್ಲಾಕ್​ ಅಧ್ಯಕ್ಷ ಮದ್ದೂರಪ್ಪ ಇದ್ದರು.
Published on
ಆನೇಕಲ್ : ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುವುದಿಲ್ಲ. ಅಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಪಟ್ಟಣದ ಎಎಸ್​ಬಿ ಆಟದ ಮೈದಾನದಲ್ಲಿ ಯುವ ಕಾಂಗ್ರೆಸ್​ ಘಟಕದಿಂದ ಆಯೋಜಿಸಿದ್ದ ಯುವ ಜನೋತ್ಸವದಲ್ಲಿ ಮಾತನಾಡಿದರು. ಕೆಪಿಸಿಸಿ ಯುವ ಘಟಕದ ಮುಖಂಡ ಮುಹಮ್ಮದ್​ ನಲಪಾಡ್​ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್​ನಿಂದ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಯುವಕರಿಗೆ ಪ್ರೋತ್ಸಾಹಿಸುವುದು ಮಾದರಿ ಎನಿಸಿದೆ ಎಂದರು.
ಯುವ ಕಾಂಗ್ರೆಸ್​ ಮುಖಂಡ ರಾಚಮಾನಹಳ್ಳಿ ಮನೋಹರ್​ ಮಾತನಾಡಿ, ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಹಮ್ಮಿಕೊಂಡಿದ್ದು, ಇದರಲ್ಲಿ ರಾಜ್ಯಾದ್ಯಂತ ಆನೇಕ ತಂಡಗಳು ಆಗಮಿಸಿ ಉತ್ತಮ ಪ್ರದರ್ಶನ ನೀಡಲಾಗಿದೆ. ಇನ್ನು ಸ್ಪರ್ಧೆಯಲ್ಲಿ ಮಹೀ ಡ್ಯಾನ್ಸ್​ ತಂಡ ಪ್ರಥಮ, ಡಿಜೆ ಕಿಂಗ್ಸ್​ ದ್ವೀತಿಯ ಹಾಗೂ ಸಿಂಧೂರ ತಂಡ ತೃತೀಯ ಬಹುಮಾನ ಪಡೆದುಕೊಂಡಿದೆ ಎಂದು ತಿಳಿಸಿದರು.
ಸರ್ಜಾಪುರ ಶಂಭಯ್ಯ, ಶ್ರೀನಿವಾಸ್​, ತಟ್ಟನಹಳ್ಳಿ ಭೈರೇಗೌಡ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಹರೀಶ್​ ಗೌಡ, ಕರ್ಪೂರು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಪಿ.ರಮೇಶ್​, ಮಾಜಿ ಅಧ್ಯಕ್ಷ ಬೆಸ್ತಮಾನಹಳ್ಳಿ ಯಲ್ಲಪ್ಪ, ಹೆನ್ನಾಗರ ಕಿರಣ್​, ಮಂಚನಹಳ್ಳಿ ಸುಬ್ರಹ್ಮಣಿ, ಅಶೋಕ್​ ಸಾಮ್ರಾಟ್​, ಅನಿಲ್​, ಅಭಿ ರೆಡ್ಡಿ, ಜೈ ಭೀಮ್​ ಸುರೇಶ್​, ಬಿ.ಎಂ.ರಾಮಚಂದ್ರ, ಮುನಿರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net