ಗ್ರಾಮೀಣ ಸಹ ಭಾಗಿತ್ವ ಕಾರ್ಯಕ್ರಮ

ಚಿಂತಾಮಣಿ ತಾಲೂಕಿನ ಕುರುಬೂರು ರೇಷ್ಮೆ ಕೃಷಿ ಕಾಲೇಜು ವಿದ್ಯಾರ್ಥಿಗಳು ತಾಲೂಕಿನ ದೊಡ್ಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಸಹ ಭಾಗಿತ್ವ ಮೌಲ್ಯಮಾಪನ ಕಾರ್ಯಕ್ರಮದ ಅಂಗವಾಗಿ ಗ್ರಾಮದ ವಿವಿಧ ಋತುಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ನೆ ತಯಾರಿಸಿರುವುದು.
ಚಿಂತಾಮಣಿ ತಾಲೂಕಿನ ಕುರುಬೂರು ರೇಷ್ಮೆ ಕೃಷಿ ಕಾಲೇಜು ವಿದ್ಯಾರ್ಥಿಗಳು ತಾಲೂಕಿನ ದೊಡ್ಡಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಸಹ ಭಾಗಿತ್ವ ಮೌಲ್ಯಮಾಪನ ಕಾರ್ಯಕ್ರಮದ ಅಂಗವಾಗಿ ಗ್ರಾಮದ ವಿವಿಧ ಋತುಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆ ನೆ ತಯಾರಿಸಿರುವುದು.
Published on

ಚಿಂತಾಮಣಿ :

ತಾಲೂಕಿನ ದೊಡ್ಡಹಳ್ಳಿಯಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮೀಣ ಸಹ

ಭಾಗಿತ್ವ ಮೌಲ್ಯಮಾಪನ ಕಾರ್ಯಕ್ರಮ ಭಾನುವಾರ ನಡೆಯಿತು.
ಮಣ್ಣು, ಕಲ್ಲು, ಹೂವು, ಹಣ್ಣು ಹಾಗೂ ನೈಸರ್ಗಿಕ ವಸ್ತು ಬಳಸಿಕೊಂಡು ವಿದ್ಯಾರ್ಥಿಗಳು ಕಲಾತ್ಮಕ ನೆ ರಚಿಸಿದ್ದು, ಗ್ರಾಮಸ್ಥರ ಗಮನ ಸೆಳೆಯಿತು.
ಸಾಮಾಜಿಕ ನೆ ತಯಾರಿಸಿ ಗ್ರಾಮದ ಪ್ರಮುಖ ಸ್ಥಳ, ಮನೆಗಳು, ಸಾಮಾಜಿಕ ವ್ಯವಸ್ಥೆ ಗುರುತಿಸಲಾಯಿತು. ಋತುಮಾನ ನೆ ತಯಾರಿಸಿ ವಿವಿಧ ಋತುಗಳಲ್ಲಿ ಬೆಳೆಯುವ ಬೆಳೆ ಮತ್ತು ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಪ್ರದರ್ಶಿಸಲಾಯಿತು.
ಸಂಪನ್ಮೂಲ ನೆ ತಯಾರಿಸಿದ ಊರಿನ ಕೆರೆ, ಕೃಷಿ ಹೊಂಡ, ವಿವಿಧ ಮಣ್ಣಿನ ಪ್ರದೇಶ ಹಾಗೂ ಇತರ ನೈಸರ್ಗಿಕ ಸಂಪನ್ಮೂಲಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು. ಸಂಚಾರ ನೆ ತಯಾರಿಸಿ ದೊಡ್ಡಹಳ್ಳಿ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಗುರುತಿಸಲಾಯಿತು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್​ ಡಾ.ರಾಮಕೃಷ್ಣ ನಾಯಕ್​, ಕೀಟಶಾಸ್ತ್ರ ವಿಭಾಗದ ಡಾ.ಕೆ.ಎಂ. ಶ್ರೀನಿವಾಸರೆಡ್ಡಿ, ಕೃಷಿ ವಿಸ್ತರಣಾ ವಿಭಾಗದ ಡಾ.ರಾಜೇಶ್​, ರೇಷ್ಮೆ ಕೃಷಿ ವಿಭಾಗದ ಡಾ.ಎನ್​.ಅಮರನಾಥ, ಡಾ.ಯಶಿಕಾ, ಡಾ.ಪಲ್ಲವಿ, ಡಾ.ಲೋಹಿತ್​ ಕುಮಾರ್​, ಡೇರಿ ಅಧ್ಯಕ್ಷ ಗೋಪಾಲಕೃಷ್ಣಪ್ಪ ಇದ್ದರು.
16.ಸಿ.ಎಂ.ವೈ.1.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net