'ಖಾಕಿ' ತೊಟ್ಟು ಬೆಳ್ಳಿ ತೆರೆಯಲ್ಲಿ ಅಬ್ಬರಿಸಲು ಸಜ್ಜಾದ ''ಚಕ್ರವರ್ತಿ ಚಂದ್ರಚೂಡ್''​​​...!

Chakravarthy chandrachood
Chakravarthy chandrachood
Published on
Chakravarthy Chandrachood| ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ರಘು ಕೋವಿ ಅವರು 'ರೂಬಿ' ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. 'ದಿಲ್​ಮಾರ್​​ ಚಿತ್ರದ ಮೂಲಕ' ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಹೆಜ್ಜೆ ಇಟ್ಟ ರಾಮ್​ ಗೌಡ 'ರೂಬಿ' ಯಲ್ಲಿ ನಾಯಕರಾಗಿ ಅಭಿನಯಿಸುತ್ತಿದ್ದು, 'ಗಾಳಿಪಟ' 'ಮಾರ್ಟಿನ್' ಸಿನಿಮಾ ಖ್ಯಾತಿಯ ನಟಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಜೋಡಿಯಾಗಿದ್ದಾರೆ. ವೆಂಕಟೇಶ್​​ ಅಂಗುರಾಜ್​ಬ ಛಾಯಾಚಿತ್ರಗ್ರಹಣ, ಸುರೇಶ್​​ ಅರಸ್​​ ಸಂಕಲನ, ವಿಕ್ರಮ್​ ಮೋರ್​​ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಇವಾನ್​​​ ಫಿಲ್ಮ್​​ ಈ ಸಿನಿಮಾವನ್ನ ನಿರ್ದೇಶಿಸುತ್ತಿದೆ.
ಕಾಪ್​​ ಪಾತ್ರದಲ್ಲಿ ಮಿಂಚಲು ಸಜ್ಜಾಗಿರುವ ''ಚಕ್ರವರ್ತಿ ಚಂದ್ರಚೂಡ್''​...!
ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನಿತ್ವ ನಟ ಮತ್ತು ಸಾಹಿತಿ ಚಕ್ರವರ್ತಿ ಚಂದ್ರಚೂಡ್​​ ಈ ಸಿನಿಮಾದಲ್ಲಿ ಪೊಲೀಸ್​​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಚಾರಿ ವಿಜಯ್ ನಾಯಕನಾಗಿ ನಟಿಸಿರುವ `ಮೇಲೊಬ್ಬ ಮಾಯಾವಿ' ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಪತ್ರಕರ್ತರಾಗಿರುವ ಇವರು ಚಿತ್ರಗಳು ಸಂಭಾಷಣೆ ಮತ್ತು ಸಾಹಿತ್ಯವನ್ನು ರಚಿಸುತ್ತಾರೆ. ಚಕ್ರವರ್ತಿ ಚಂದ್ರಚೂಡ್ ಅವರು ಬಹುಮುಖ ಪ್ರತಿಭೆ ಎಂಬುದನ್ನು ಯಾರಿಗೂ ಹೇಳಬೇಕಾಗಿಯೇ ಇಲ್ಲ. ಏಕೆಂದರೆ, ಅವರು ಸಕಲ ಕಲಾವಲ್ಲಭ ಎಂಬ ಬಿರುದು ಕೂಡ ಪಡೆದಿದ್ದಾರೆ. ಸಿನಿಮಾ ನಿರ್ದೇಶನ ಮಾತ್ರವಲ್ಲ, ಸಾಕಷ್ಟು ಕ್ಷೇತ್ರಗಳಲ್ಲಿ ಯಶಸ್ಸು ತಮ್ಮದಾಗಿಸಿಕೊಂಡಿದ್ದಾರೆ, ಹೆಸರು ಮಾಡಿದ್ದಾರೆ.
5ನೇ ಬಾರಿ ಪೋಲೀಸ್​ ಪಾತ್ರಕ್ಕೆ ಬಣ್ಣ...!
ಚಕ್ರವರ್ತಿ ಚಂದ್ರಚೂಡ್​ ಅವರಿಗೆ ‘ಬಿಗ್​ ಬಾಸ್ ಕನ್ನಡ ಸೀಸನ್​ 8’ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ. ಸಿನಿಮಾ ರಂಗದ ಜೊತೆಗೂ ಹೆಚ್ಚು ಒಡನಾಟ ಹೊಂದಿರುವ ಅವರು 'ರೂಬಿ' ಸಿನಿಮಾ ಮೂಲಕ ಪೋಲೀಸ್​​ ಪಾತ್ರದಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ. ಈ ಸಿನಿಮಾ ಒಂದು ನೈಜ ಆಧಾರಿತ ಘಟನೆಯ ಕಥೆಯಾಗಿದ್ದು ಸ್ಪೆಷಲ್​ ಕಾಪ್​ ಚಕ್ರವರ್ತಿ ಚಂದ್ರಚೂಡ್​​ ಸಿನಿಮಾದ ಕೊನೆಯವರೆಗೂ ಕಥೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಹಾಗೇನೆ ಯಾವ ರೀತಿ ಈ ಸ್ಪೆಷಲ್​ ಕಾಪ್​​ ಪ್ರಕರಣವನ್ನ ಭೇದಿಸುತ್ತಾರೆ ಅನ್ನೋದೇ ಸಸ್ಪೆನ್ಸ್​​. 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಕ್ರವರ್ತಿ ಚಂದ್ರಚೂಡ್​ ನಟ, ಬರಹಗಾರ ಮತ್ತು ಪತ್ರಕರ್ತರೂ ಆಗಿರೋ ಕಾರಣ ಈ ಸಿನಿಮಾದಲ್ಲಿ ಪ್ರಕರಣದ ಬಗೆಗಿನ ಅಸಲಿ ಕಥೆಯನ್ನ ತಿಳಿದುಕೊಂಡು ಈ ಪೋಲೀಸ್​​ ಪಾತ್ರ ನಿರ್ವಹಿಸೋದು ಸುಲಭವಾಯ್ತು ಅಂತಲೂ ಹೇಳಿದ್ದಾರೆ.
ನೈಜ ಘಟನೆ ಆಧಾರಿತ ಸಿನಿಮಾ..!
ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಯನ್ನು ರೂಬಿ ಸಿನಿಮಾ ಮೂಲಕ ಹೇಳಲು ಹೊರಟ್ಟಿದ್ದೇವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಶೇಖಡ 50ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ. ಸಿನಿಮಾ 2026ರ ಮೊದಲಾರ್ಧದಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಸಿನಿಮಾ ಹೆಸರೇ ವಿಭಿನ್ನವಾಗಿ ''ರೂಬಿ'' ಎಂದು ಇಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net