ಹೊಸಕೋಟೆ ಹಾಲು ಉತ್ಪಾದಕರಿಗೆ 3.53 ಕೋಟಿ ರೂ. ಬಿಡುಗಡೆ / HOSAKOTE

ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ ಗೌಡ
ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ ಗೌಡ
Published on
ಹೊಸಕೋಟೆ : ಹಾಲು ಉತ್ಪಾದಕರಿಗೆ ಬಮುಲ್​ನಿಂದ ಪ್ರತಿ ಲೀಟರ್​ಗೆ 1 ರೂ. ನಂತೆ ವಿಶೇಷ ಹೆಚ್ಚುವರಿ ದರ ಬಿಡುಗಡೆ ಮಾಡಿ ಉತ್ಪಾದಕರ ಖಾತೆಗೆ ಜಮೆ ಮಾಡಲಾಗಿದೆ ಎಂದು ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ ಹೇಳಿದರು.
ಬೆಂಡಿಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್​ ಅಧ್ಯಕ್ಷತೆಯಲ್ಲಿ ಬಮುಲ್​ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಕಲ್ಪಿಸುವ ಹಲವು ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ಉತ್ಪಾದಕರೇ ಬಮುಲ್​ ಶಕ್ತಿಯಾಗಿದ್ದು, ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಅನುಕೂಲಕ್ಕಾಗಿ 2025 ಏ.1ರಿಂದ ಮಾ.31 2026ರ ಅವಧಿಯಲ್ಲಿ ಹಾಲು ಪೂರೈಕೆ ಮಾಡಿರುವವರಿಗೆ ಪ್ರತಿ ಲೀಟರಿಗೆ 1 ರೂ. ನಂತೆ ವಿಶೇಷ ಹೆಚ್ಚುವರಿ ದರ ನೀಡಲಾಗಿದೆ ಎಂದರು.
ವ್ಯಾಪ್ತಿಗೆ ಬರುವ ಹಾಲು ಉತ್ಪಾದಕರ ಸಹಕಾರ ಸಂದಿಂದ ಒಟ್ಟಾರೆ 12.94.17 ಲೀಟರ್​ ಹಾಲನ್ನು ಬಮುಲ್​ಗೆ ನೀಡಿದ್ದು, ಹೆಚ್ಚುವರಿ 1 ರೂ. ದರವನ್ನು ಅಧ್ಯಕ್ಷ ಡಿ.ಕೆ.ಸುರೇಶ್​ ಅವರ ಖಾತೆಯಿಂದ ನೇರವಾಗಿ ನನ್ನ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ವರ್ಗಾವಣೆ ಮಾಡಿ ನುಡಿದಂತೆ ನಡೆದುಕೊಂಡ ಬಮುಲ್​ ಅಧ್ಯಕ್ಷರಿಗೆ ತಾಲೂಕಿನ ಹೈನುಗಾರರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ತಾಲೂಕಿಗೆ 3.53 ಕೋಟಿ : ರಾಜ್ಯಾದ್ಯಂತ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವವರ ಖಾತೆಗಳಿಗೆ ಹೆಚ್ಚುವರಿ ದರದ ಕಳುಹಿಸಲಾಗಿದ್ದು, ತಾಲೂಕಿನಲ್ಲಿ ಹಾಲು ಉತ್ಪಾದಕರಿಗೆ ಈ ವಿಶೇಷ ಹೆಚ್ಚುವರಿ ದರ ಯೋಜನೆಯಲ್ಲಿ 3.53 ಕೋಟಿ ರೂ. ಉತ್ಪಾದಕರ ಖಾತೆಗಳಿಗೆ ಕಳುಹಿಸಲಾಗಿದೆ. ರಾಜ್ಯದಲ್ಲಿಯೇ ಹೆಚ್ಚಿನ ಹೆಚ್ಚುವರಿ 1 ರೂಪಾಯಿ ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರಿಗೆ ಸಿಕ್ಕಿದೆ ಎಂದು ಬಿ.ವಿ.ಸತೀಶ್​ಗೌಡ ಹೇಳಿದರು. ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶ್ರೀರಾಮ್​ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net