ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು : ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ ಹೆಚ್ಚು ಅನುದಾನ ಮೀಸಲಿಡಲಾಗಿದ್ದು, ಅಂದಾಜು 17 ಕೋಟಿ ರೂ. ಬೀದಿ ದೀಪಗಳ ಅಳವಡಿಕೆಗೆ ಸಿಸಿ ಕ್ಯಾಮರಾ ಅಳವಡಿಕೆ, ಮಳೆ ನೀರು ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ನಗರಸಭೆಯ ನೂತನ ಕಚೇರಿ ನಿರ್ಮಾಣಕ್ಕಾಗಿ 50 ಲ ರೂ. ಮೀಸಲಿಡಲಾಗಿದೆ. ನಗರಸಭೆ ಸೊತ್ತುಗಳಿಗೆ ತಂತಿ ಬೇಲಿ ಅಳವಡಿಸಲು 20 ಲ ರೂ. ಅಂದಾಜಿಸಲಾಗಿದೆ. ಇದರಿಂದಾಗಿ ಸರ್ಕಾರಿ ಭೂಮಿಗಳ ಸಂರಣೆ ಸಾಧ್ಯವಾಗುತ್ತದೆ ಎಂದು ನಗರಸಭಾ ಅಧ್ಯೆ ಸುಜಾತಾ ಹರೀಶ್ ತಿಳಿಸಿದರು.