ಮಧುಗಿರಿ:: ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರಿಗೆ 7 ರೂಪಾಯಿಗಳ ಪ್ರೋತ್ಸಾಹಧನ ಸಿಗಲಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಹಾಲು ಉತ್ಪಾದಕರ ಪರವಾಗಿ ಅಭಿನಂದಿಸುವುದಾಗಿ ತುಮುಲ್ ನಿರ್ದೇಶಕ ಬಿ.ನಾಗೇಶ ಬಾಬು ತಿಳಿಸಿದರು.
ಪಟ್ಟಣದ ತುಮುಲ್ ಉಪಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ 5 ರೂ. ಜತೆಗೆ ಎರಡು ರೂಪಾಯಿ ಹೆಚ್ಚಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ 2 ರೂಪಾಯಿ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೂಷಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು.
ತಾಲೂಕು ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೆ ಬರಲು ಪೈಪೋಟಿ ನಡೆಯುತ್ತಿದ್ದು, ಕಾರ್ಯದರ್ಶಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಕಾರ್ಯದರ್ಶಿಗಳು ಗುಣಮಟ್ಟದಲ್ಲಿ ರಾಜಿ ಆಗಬಾರದು. ಯಶಸ್ವಿನಿ ಯೋಜನೆ ಅಡಿಯಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಾಯಿಸಬೇಕು ಮತ್ತು ಈ ಯೋಜನೆ ಬಗ್ಗೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು. ಕಾರ್ಯದರ್ಶಿಗಳು, ಹಾಲು ಶೇಖರಿಸುವವರು ಮತ್ತು ಹಾಲು ಹಾಕುವವರು ಆರೋಗ್ಯದ ಕಡೆ ಗಮನಹರಿಸಬೇಕು.
ಹಾಲು ಉತ್ಪಾದಕರ ಸಂಗಳಿಗೆ ಚುನಾವಣೆ ನಡೆಸದೇ ಅವಿರೋಧ ಆಯ್ಕೆಗೆ ಹೆಚ್ಚು ಹೊತ್ತು ನೀಡಬೇಕು. ಇದರಿಂದ ಚುನಾವಣಾ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದರು.
ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಓಬಳೇಶ್ ಮಾತನಾಡಿ, ಯಶಸ್ವಿನಿ ಯೋಜನೆ ಫೆಬ್ರವರಿ ಒಳಗೆ ನೋಂದಣಿ ಮಾಡಿಸಿಕೊಳ್ಳಬೇಕು. ಹಾಲು ಉತ್ಪಾದಕ ಸಂಗಳ ಚುನಾವಣೆ ನಡೆಸಲು ಕರಡು ಮತದಾರರ ಪಟ್ಟಿ, ಆಡಿಟ್ ವರದಿ, ಷೇರುದಾರರ ಪಟ್ಟಿ ಅತ್ಯವಶ್ಯಕ. ತಮ್ಮ ಸಂಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.
ಕೆಎಂಎ್ ಮಾಜಿ ನಿರ್ದೇಶಕ ಕಾಂತರಾಜು, ತುಮುಲ್ ತಾಲೂಕು ಮುಖ್ಯಸ್ಥ ರಂಜಿತ್, ಸಿಬ್ಬಂದಿ ದಿವಾಕರ್, ರವಿತೇಜ, ಶ್ವೇತಾ, ನಾಗಮಣಿ, ಕಾರ್ಯದರ್ಶಿಗಳಾದ ಚೌಡಪ್ಪ, ಡಿವಿ ಹಳ್ಳಿ ತಿಮ್ಮಣ್ಣ, ಅಶ್ವತ್ಥರೆಡ್ಡಿ, ಮಲ್ಲಮ್ಮ, ಲ್ಮ ನರಸಮ್ಮ, ಮುಖಂಡ ಕುರುಬರಹಳ್ಳಿ ಹರ್ಷ ಇತರರಿದ್ದರು.