ನೆಲಮಂಗಲಕ್ಕೆ 1,250 ಕೋಟಿ ರೂ. ಅನುದಾನ / NELAMANGAL

ನೆಲಮಂಗಲ ಡಾ.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಶಾಸಕ ಎನ್​.ಶ್ರೀನಿವಾಸ್​ ಸನ್ಮಾನಿಸಿದರು. ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​ ಮತ್ತಿತರರು ಇದ್ದರು.
ನೆಲಮಂಗಲ ಡಾ.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಶಾಸಕ ಎನ್​.ಶ್ರೀನಿವಾಸ್​ ಸನ್ಮಾನಿಸಿದರು. ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​ ಮತ್ತಿತರರು ಇದ್ದರು.
Published on

ನೆಲಮಂಗಲ :

ತಾಲೂಕು ಭೌಗೋಳಿಕವಾಗಿ ಚಿಕ್ಕದಾಗಿತ್ತು. ಸೋಲೂರು ಜನ ನಮಗೆ ಮತ ಹಾಕಿದರೂ ಆಡಳಿತಾತ್ಮಕವಾಗಿ ಮಾಗಡಿಗೆ ಸೇರಿದ್ದರು. ಜನರ ಬೇಡಿಕೆಯಂತೆ ಸೋಲೂರು ನೆಲಮಂಗಲಕ್ಕೆ ಸೇರ್ಪಡೆಗೊಂಡಿದ್ದು, ೇತ್ರದ ಅಭಿವೃದ್ಧಿಗೆ 1,250 ಕೋಟಿ ರೂ.ಗೂ ಹೆಚ್ಚು ಅನುದಾನ ತರಲಾಗಿದೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ನಗರದ ಡಾ.ಅಂಬೇಡ್ಕರ್​ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ತ್ಯಾಮಗೊಂಡ್ಲು ರಸ್ತೆ, ಸೊಂಡೇಕೊಪ್ಪ ರಸ್ತೆ, ಕೆಂಪಲಿಂಗನಹಳ್ಳಿ ರಸ್ತೆ, ಮೋಟಗಾನಹಳ್ಳಿ ರಸ್ತೆ, ಶಿವಗಂಗೆ, ಮಾಕೇನಹಳ್ಳಿ ರಸ್ತೆಯನ್ನು ನಾಲ್ಕು ಪಥವಾಗಿ ಮೇಲ್ದರ್ಜೆಗೇರಿಸಲಾಗಿದೆ.

2026ರ ಬಜೆಟ್​ನಲ್ಲಿ ಸುಮಾರು 6,993 ಕೋಟಿ ವೆಚ್ಚದಲ್ಲಿ 6 ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ ಜಾರಿಗೊಂಡಿದ್ದು, ತಾಲೂಕಿಗೂ ಕಾವೇರಿ ನೀರು ತರಲಾಗುವುದು. ಕೆರೆ ಶುದ್ಧಗೊಳಿಸುವ ನಿಟ್ಟಿನಲ್ಲಿ ಕೆರೆ ಸಂರಕ್ಷಣಾ ಪ್ರಾಧಿಕಾರ, ನಗರಾಭಿವೃದ್ಧಿ ಯೋಜನೆಗೆ ಚಾಲನೆ ಹಾಗೂ ನಗರಕ್ಕೆ ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಸೋಲೂರು ಹೋಬಳಿಯ ಹೇಮಾವತಿ ಯೋಜನೆಯಿಂದ ಸುಮಾರು 17 ಕೆರೆಗಳಿಗೆ ನೀರು ಪೂರೈಕೆ ಕಾಮಗಾರಿಗೆ ಶ್ರೀದಲ್ಲಿ ಮುಖ್ಯಮಂತ್ರಿಗಳು, ಸಚಿವರನ್ನು ಕರೆಸಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಮಹನೀಯರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ$್ಯ ದೊರಕಿದ್ದು, ಸ್ವಾತಂತ್ರ$್ಯ ಹೋರಾಟಗಾರರನ್ನು ಸ್ಮರಿಸೋಣ ಎಂದರು.

ಪಥ ಸಂಚಲನ, ಸಾಂಸತಿಕ ಕಾರ್ಯಕ್ರಮ: ಶಾಸಕರು ಧ್ವಜವಂದನೆ ಸ್ವೀಕರಿಸದರು. ಆಕರ್ಷಕರ ಪಥಸಂಚಲನ ಗಮನಸೆಳೆಯಿತು. ವಿವಿಧ ಶಾಲಾ&ಕಾಲೇಜು ವಿದ್ಯಾರ್ಥಿಗಳು ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಉತ್ತಮ ಪ್ರದರ್ಶನ ನೀಡಿದವರಿಗೆ ಗಣ್ಯರು ನಗದು ಬಹುಮಾನ ನೀಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ೇತ್ರಗಳ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.

ತಹಸೀಲ್ದಾರ್​ ಮಲ್ಲೇಶ್​ ಬೀರಪ್ಪ ಪೂಜಾರ್​, ಎನ್​ಡಿಎ ಅಧ್ಯಕ್ಷ ಎಂ.ಕೆ ನಾಗರಾಜು, ಸದಸ್ಯ ಬಿನ್ನಮಂಗಲ ವೆಂಕಟೇಶ್​, ಮಾಜಿ ಅದ್ಯಕ್ಷ ನಾರಾಯಣ್​ಗೌಡ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಟಿಎಪಿಸಿಎಂಎಸ್​ ಅಧ್ಯಕ್ಷ ಹನುಮಂತರಾಜು, ಬಿಇಒ ಕೆ.ಸಿ.ರಮೇಶ್​, ಇಒ ಬಿಂದು, ಡಿವೈಎಸ್ಪಿ ಉಮಾರಾಣಿ, ನಗರಸಭೆ ಆಯುಕ್ತ ಗಂಗಾಧರ್​, ಉಪಾಧ್ಯಕ್ಷ ಆನಂದ್​, ಸದಸ್ಯರಾದ ಪ್ರದಿಪ್​, ಪೂರ್ಣಿಮಾ ಸುಗ್ಗರಾಜು, ಲೋಲಾ ಗಂಗಾಧರ್​, ಸುಧಾ ಕೃಷ್ಣಪ್ಪ, ಗ್ಯಾರಂಟಿ ಸಮಿತಿ ಅಧ್ಯೆ ನಾಗರತ್ನಮ್ಮ, ಮುಖಂಡರಾದ ಸಿ.ಎಂ.ಗೌಡ, ರವಿಕುಮಾರ್​, ಬೈಲಮೂರ್ತಿ, ಮನುಕುಮಾರ್​ ಮತ್ತಿತರರಿದ್ದರು.

6ಸಾವಿರ ನಿವೇಶನ ಹಂಚಿಕೆ :

ಪೋಡಿಮುಕ್ತ ತಾಲೂಕು ಮಾಡಲಾಗಿದೆ. 68 ಕಂದಾಯ ಉಪಗ್ರಾಮ ರಚನೆಯಾಗಿದ್ದು, 8 ಸಾವಿರ ಹಕ್ಕು ಪತ್ರ ನೀಡಲು ತೀರ್ಮಾನಿಸಲಾಗಿದೆ. ತಾಲೂಕಿನಲ್ಲಿ ಸುಮಾರು 15800 ಪೌತಿ ಖಾತೆಯಾಗಿವೆ. ಜತೆಗೆ ಆಶ್ರಯ ಯೋಜನೆಗೆ 250 ಎಕರೆ ಭೂಮಿ ಗುರಿತಿಸಿದ್ದು, 6000ಕ್ಕೂ ಹೆಚ್ಚು ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಶ್ರೀನಿವಾಸ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net