ಕೂಡ್ಲಿಗಿಯ ಶ್ರೀ ಕೊತ್ತಲ ಆಂಜನೇಯ ದೇವಸ್ಥಾನದ ಹುಂಡಿಯಲ್ಲಿನ ಹಣ ಎಣಿಕೆ ಮಾಡಲಾಯಿತು. ಪ್ರಮುಖರಾದ ಎನ್.ಗಂಗಾಧರ, ಕಾಟೇರ ಹಾಲೇಶ್, ಎನ್.ರಮೇಶ್, ಎಚ್.ವೀರಭದ್ರಪ್ಪ, ಸಿ.ಬಿ.ಜಯರಾಂ ನಾಯಕ, ಮಲ್ಲಾಪುರದ ರಾಘವೇಂದ್ರ ಇತರರಿದ್ದರು.
Published on:
Copied
Follow Us
ಕೂಡ್ಲಿಗಿ: ಪಟ್ಟಣದ ಶ್ರೀ ಕೊತ್ತಲ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿನ ಹಣ ಎಣಿಕೆ ಮಂಗಳವಾರ ನಡೆಯಿತು.
ಹುಂಡಿಯಲ್ಲಿ 1.03 ಲಕ್ಷ ರೂ. ಸಂಗ್ರಹವಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಎನ್.ಗಂಗಾಧರ ಸಮ್ಮುಖದಲ್ಲಿ ಕಂದಾಯ ಅಧಿಕಾರಿಗಳು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ, ಪಟ್ಟಣದ ಸಾರ್ವಜನಿಕರು ಹಣ ಎಣಿಕೆ ಮಾಡಿದರು.
ಹುಂಡಿಯಲ್ಲಿನ ಹಣವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.