ಮೃತರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ

ವಿದ್ಯುತ್​ ಅವಡದಲ್ಲಿ ಈಚೆಗೆ ಮೃತಪಟ್ಟ ಗೋಕಾಕ ತಾಲೂಕಿನ ರೈತರ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ  ಪರಿಹಾರಧನದ ಚೆಕ್​ ವಿತರಿಸಿದರು. ಪರಸಪ್ಪ ಮೇಲ್ಮಟ್ಟಿ, ಮುತ್ತೆಪ್ಪ ಕುಳ್ಳೂರ, ಹೆಸ್ಕಾಂ ಅಧಿಕಾರಿಗಳಾದ ವಿ.ಬಿ.ಹಿರಡ್ಡಿ, ಕೆ.ಸಿ.ಧರ್ಮಾ, ಬಿ.ಜಿ.ಬಡಿಗೇರ ಇತರರಿದ್ದರು.

Published on
ಗೋಕಾಕ: ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ರೈತ ರಾಮಪ್ಪ ಅಪ್ಪಯ್ಯ ಪೂಜೇರಿ ಮತ್ತು ನಲ್ಲಾನಟ್ಟಿ ಗ್ರಾಮದ ರೈತ ಲಕ್ಷ$್ಮಣ ಹನುಮಂತ ಹರಿಜನ ಇತ್ತೀಚೆಗೆ ವಿದ್ಯುತ್​ ಅವಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತ್ರಸ್ತ ಕುಟುಂಬಗಳಿಗೆ ತಲಾ 5 ಲ ರೂ. ಪರಿಹಾರದ ಚೆಕ್​ ಬುಧವಾರ ವಿತರಿಸಿ ಮಾತನಾಡಿ, ಮೃತರ ಕುಟುಂಬಗಳಿಗೆ ಸರ್ಕಾರ ಐದು ಲ ರೂ.ಪರಿಹಾರಧನ ನೀಡಿದೆ. ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಪರಸಪ್ಪ ಮೇಲ್ಮಟ್ಟಿ, ಮುತ್ತೆಪ್ಪ ಕುಳ್ಳೂರ, ಹೆಸ್ಕಾಂ ಅಧಿಕಾರಿಗಳಾದ ವಿ.ಬಿ.ಹಿರಡ್ಡಿ, ಕೆ.ಸಿ.ಧರ್ಮಾ, ಬಿ.ಜಿ.ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net