ಇಬ್ಬರಿಗೆ ತಲಾ ರು.1 ಕೋಟಿ ಪರಿಹಾರ

ಅಪಘಾತದಲ್ಲಿ ನಿಧನ ಹೊಂದಿದ ಕೆಕೆಆರ್​ಟಿಸಿ ನೌಕರರ ಅವಲಂಬಿತರಿಗೆ ಸೋಮವಾರ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್​, ಎಂಡಿ ಡಾ.ಬಿ.ಸುಶೀಲಾ ಪರಿಹಾರ ಚೆಕ್​ ವಿತರಿಸಿದರು. ಎಸ್​ಬಿಐ ಅಧಿಕಾರಿಗಳಿದ್ದರು.
ಅಪಘಾತದಲ್ಲಿ ನಿಧನ ಹೊಂದಿದ ಕೆಕೆಆರ್​ಟಿಸಿ ನೌಕರರ ಅವಲಂಬಿತರಿಗೆ ಸೋಮವಾರ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್​, ಎಂಡಿ ಡಾ.ಬಿ.ಸುಶೀಲಾ ಪರಿಹಾರ ಚೆಕ್​ ವಿತರಿಸಿದರು. ಎಸ್​ಬಿಐ ಅಧಿಕಾರಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಹೇಳಿಕೆ
  • ಎಸ್​ಬಿಐನಲ್ಲಿ ಖಾತೆ ಹೊಂದಿದ ನೌಕರರಿಗೆ ಪ್ಲಸ್​
ಕಲಬುರಗಿ: ಎಸ್​ಬಿಐ ಜತೆಗಿನ ನಿಗಮದ ಒಪ್ಪಂದದಂತೆ ವೇತನ ಖಾತೆ ಹೊಂದಿರುವ ನೌಕರರು ಕರ್ತವ್ಯದ ವೇಳೆ ಅಥವಾ ವೈಯಕ್ತಿಕ ಅಪಘಾತದಲ್ಲಿ ಮೃತಪಟ್ಟಲ್ಲಿ ಅವಲಂಬಿತರಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ್​ ಹೇಳಿದರು.
ನಿಗಮದ ಕೇಂದ್ರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೇವಾವಧಿಯಲ್ಲಿ ನಿಧನರಾದ ಕೊಪ್ಪಳ ವಿಭಾಗದ ಉಮೇಶ ವಾರಸುದಾರೆ ವಿಜಯಲಕ್ಷ್ಮೀ ಮತ್ತು ಯಾದಗಿರಿ ವಿಭಾಗದ ರವಿ ವಾರಸುದಾರರಾದ ಪಾರ್ವತಿಗೆ ತಲಾ ಒಂದು ಕೋಟಿ ರೂ. ಪರಿಹಾರ ಚೆಕ್​ ವಿತರಿಸಿದ ಅವರು, ಒಂದು ಪ್ರಕರಣದಲ್ಲಿ ಅಂಗವಿಕಲ ವಿಮೆ 25 ಲಕ್ಷ ರೂ. ಸೇರಿ 6.75 ಕೋಟಿ ರೂ. ಮೊತ್ತದ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಸಿಂಧನೂರು, ರಾಯಚೂರು, ಹರಪನಹಳ್ಳಿ, ಮುದ್ದೇಬಿಹಾಳ, ವಿಜಯಪುರ, ಕುಕನೂರು, ಯಾದಗಿರಿ ಟಕಕ್ಕೆ ಸೇರಿದ ನೌಕರರು ಮೃತಪಟ್ಟಿದ್ದಲ್ಲಿ ಅವಲಂಬಿತರಿಗೆ ತಲಾ 10 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು.
ನಿಗಮದ ವ್ಯಾಪ್ತಿಯಲ್ಲಿ ನಿರ್ವಾಹಕ 300 ಮತ್ತು ಕ್ಲರ್ಕ್​ 3 ಸೇರಿ 313 ಹುದ್ದೆ ಭರ್ತಿ ಮಾಡಲಾಗುತ್ತಿದ್ದು, ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ನಡೆಸಿದೆ ಎಂದ ಅವರು, 400 ಹೊಸ ಬಸ್​ ಖರೀದಿಗೆ ಟೆಂಡರ್​ ಆಗಿದೆ. ಇವು ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿವೆ. ರಾಜ್ಯ ಬಜೆಟ್​ನಿಂದ ಅನುದಾನ ಒದಗಿಸುವುದಾಗಿ ಸರ್ಕಾರ ಹೇಳಿದೆ ಎಂದು ಹೇಳಿದರು.
ಕಲಬುರಗಿ ನಗರದ ನಾಲ್ಕು ದಿಕ್ಕಿನಲ್ಲಿ ಸೆಟ್​ಲೈಟ್​ ಬಸ್​ ನಿಲ್ದಾಣ ನಿರ್ಮಾಣ ಯೋಜನೆ ಇದ್ದು, ಗುಲ್ಬರ್ಗ ವಿವಿ 2 ಎಕರೆ ಜಮೀನು ನೀಡಿದೆ. ಉಳಿದಂತೆ ಆಳಂದ ರಸ್ತೆ ಕೃಷಿ ವಿಜ್ಞಾನ ಕೇಂದ್ರ, ಹುಮನಾಬಾದ್​ ರಸ್ತೆಯ ಪಶುಸಂಗೋಪನೆ ಇಲಾಖೆ (ಕೆಎಂಎಫ್​), ಜೇವರ್ಗಿ ರಸ್ತೆಯ ಕೃಷಿ ಇಲಾಖೆಗೆ ಸಂಬಂಧಿಸಿದ ಜಮೀನಿನಲ್ಲಿ ಸ್ಥಳ ನೀಡಲು ಕೋರಲಾಗಿದೆ ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ. ಸುಶೀಲಾ ಮಾತನಾಡಿ, ಎಸ್​ಬಿಐನಲ್ಲಿ ಖಾತೆ ಹೊಂದಿದ ನೌಕರರು ಮೃತಪಟ್ಟರೆ ಪರಿಹಾರ ಮೊತ್ತ ಬ್ಯಾಂಕ್​ ಒದಗಿಸಲಿದೆ. ಈ ಮೊದಲು 50 ಲಕ್ಷ ರೂ. ಇದ್ದ ಪರಿಹಾರ ಇದೀಗ ಒಂದು ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದರು.
"

2022ರ ಜ.1ರಿಂದ 2026ರ ಜ.31ರವರೆಗೆ ಸೇವಾ ಅವಧಿಯಲ್ಲಿ ನಿಧನರಾದ ನೌಕರರ ಅವಲಂಬಿತರಿಗೆ ಆಂತರಿಕ ಗುಂಪು ವಿಮೆ ಯೋಜನೆ ಅಡಿ ತಲಾ 10 ಲಕ್ಷದಂತೆ 380 ಪ್ರಕರಣಗಳಲ್ಲಿ 38 ಕೋಟಿ ರೂ. ಪರಿಹಾರ ನೀಡಲಾಗಿದೆ.

— > ಅರುಣಕುಮಾರ ಎಂ.ವೈ.ಪಾಟೀಲ್​ ಅಧ್ಯಕ್ಷ, ಕೆಕೆಆರ್​ಟಿಸಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net