ಕೊಂಚವೂ ತಡಮಾಡದ ಹೆಡ್ ಕಾನ್ಸ್ಟೇಬಲ್ ಸುಕುಮಾರ್ ಕೋಚ್ಗೆ ಧಾವಿಸಿ ಸೀಟ್ ಕೆಳಗಿದ್ದ ಬ್ಯಾಗ್ನ್ನು ನೋಡಿ, ಅದನ್ನು ಮುಂಜಾನೆ 5:15 ಆರ್ಪಿಎಫ್ ಅಧಿಕಾರಿಗಳಿಗೆ ತಲುಪಿಸುವ ಕೆಲಸವನ್ನು ಮಾಡಿದರು. ದಂಪತಿಯನ್ನು ರೈಲ್ವೆ ನಿಲ್ದಾಣಕ್ಕೆ ಕರೆಸಿ ಬ್ಯಾಗ್ ಪರೀಶಿಲಿಸಿ ಹಸ್ತಾಂತರಿಸಿದ್ದಾರೆ. ಬ್ಯಾಗ್ನಲ್ಲಿದ್ದ 50 ಗ್ರಾಂ ತೂಕದ ಚಿನ್ನಾಭರಣ ಮತ್ತು 3500 ರೂ ನಗದು ತಲುಪಿಸಿದ್ದಾರೆ. ರೈಲ್ವೆ ಸಿಬ್ಬಂದಿಯ ಪ್ರಾಮಾಣಿಕತೆ ಮತ್ತು ಕೆಲಸದ ವೇಗಕ್ಕೆ ದಂಪತಿ ಮೆಚ್ಚುಗೆ ವ್ಯಕ್ತಪಡಿಸಿ, ಪ್ರಶಂಸಿದರು, (ಏಜೆನ್ಸೀಸ್).