ರೌಡಿ ಶೀಟರ್​ ಬರ್ಬರ ಹತ್ಯೆ / SULIBELE

ಖಲೀಮ್​ ಖಾನ್​
ಖಲೀಮ್​ ಖಾನ್​
Published on
ಹೊಸಕೋಟೆ / ಸೂಲಿಬೆಲೆ: ತಾಲೂಕಿನ ಸೂಲಿಬೆಲೆ ಠಾಣಾ ವ್ಯಾಪ್ತಿಯ ಮಾರುತಿನಗರದ ಮುಖ್ಯರಸ್ತೆಯಲ್ಲಿ ಶನಿವಾರ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಮಾರಾಕಾಸಗಳಿಂದ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಸೂಲಿಬೆಲೆಯ ಖಲೀಮ್​ ಖಾನ್​(45) ಮೃತ. ಖಲೀಮ್​ನನ್ನು ರಸ್ತೆಯಲ್ಲಿ ಅಡ್ಡ ಹಾಕಿದ ದುಷ್ಕರ್ಮಿಗಳು ಆತನ ದೇಹದ 10ಕ್ಕೂ ಹೆಚ್ಚು ಕಡೆ ಮಾರಕಾಸ್ತ್ರಗಳಿಂದ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾರೆ. ಸೂಲಿಬೆಲೆ ಮಾರುತಿ ನಗರಕ್ಕೆ ಸಂಪರ್ಕ ಹೊಂದಿರುವ ರಸ್ತೆ ಬದಿಯಲ್ಲಿರುವ ಕಲ್ಯಾಣಿ ಮತ್ತು ಬ್ರಾಹ್ಮಣರ ಸ್ಮಶಾನದ ರಸ್ತೆಯಲ್ಲಿ ಶನಿವಾರ ತಡ ರಾತ್ರಿ ಈ ಕೃತ್ಯ ನಡೆದಿದೆ. ಖಲೀಮ್​ ಖಾನ್​ ಸೂಲಿಬೆಲೆ ಠಾಣೆಯಲ್ಲಿ ರೌಡಿ ಶೀಟರ್​. ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಅಕ್ರಮ ಕ್ಯಾಟ್​ ಪಿಶ್​ ಸಾಕಣೆ ದಂಧೆ, ಕಸಾಯಿ ಖಾನೆಗೆ ಗೋವುಗಳ ಸಾಗಣೆ, ಗಾಂಜಾ ಸರಬರಾಜು ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಹಾಗೂ ಹಪ್ತಾ ವಸೂಲಿ ಮಾಡುತ್ತಿದ್ದ ಎಂದು ಸ್ಥಳಿಯರು ದೂರಿದ್ದಾರೆ.
ಕೊಲೆ ಪ್ರಕರರಣಕ್ಕೆ ಸಂಬಂಧಿಸಿದಂತೆ ಖಲೀಮ್​ನ ವ್ಯವಹಾರ ಪಾಲುದಾರರು ಅಥವಾ ಆತನಿಂದ ಮೋಸಕ್ಕೊಳಗಾದವರು ಈ ಕೃತ್ಯ ಎಸಗಿರಬಹುದೆಂದು ಹೇಳಲಾಗುತ್ತಿದೆ.
ಯಾವ ಉದ್ದೇಶಕ್ಕೆ ಯಾರು ಹತ್ಯೆ ಮಾಡಿದ್ದಾರೆ ಎಂಬುದರ ಬಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಸೂಲಿಬೆಲೆ ಪೊಲೀಸರು ತಿಳಿಸಿದ್ದಾರೆ. ಸೂಲಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸ್ಥಳಕ್ಕೆ ಹೊಸಕೋಟೆ ಉಪವಿಭಾಗದ ಡಿವೈಎಸ್​ಪಿ ಮಲ್ಲೇಶ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net