ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವ ರೋಟರಿ

ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆಯ ಇಂಟರ‌್ಯಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಜಗದೀಶ್ ಪ್ರಶಾಂತ್, ಬಿ.ಜಿ. ಅನಂತಶಯನ, ಸುಧೀರ್, ಸತ್ಯ ಸುಲೋಚನ, ರಾಜೇಶ್ ಇದ್ದರು.
ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆಯ ಇಂಟರ‌್ಯಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಜಗದೀಶ್ ಪ್ರಶಾಂತ್, ಬಿ.ಜಿ. ಅನಂತಶಯನ, ಸುಧೀರ್, ಸತ್ಯ ಸುಲೋಚನ, ರಾಜೇಶ್ ಇದ್ದರು.
Published on

ಮಡಿಕೇರಿ:

ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆಯ ಇಂಟರ‌್ಯಾಕ್ಟ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಎ.ಸಿ. ಕಾನಿಷ್ಕ, ಉಪಾಧ್ಯಕ್ಷರಾಗಿ ಎಂ. ಮನನ್, ಕಾರ್ಯದರ್ಶಿಯಾಗಿ ವಿಶ್ರುತ, ಸಹ ಕಾರ್ಯದರ್ಶಿಯಾಗಿ ಸುಚೇತ್, ಖಜಾಂಚಿಯಾಗಿ ಶಿಶಿರ್‌ಭಟ್ ಹಾಗೂ ನಿರ್ದೇಶಕರು ಅಧಿಕಾರ ವಹಿಸಿಕೊಂಡರು.

ಮಿಸ್ಟಿ ಹಿಲ್ಸ್‌ನ ಮಾಜಿ ಅಧ್ಯಕ್ಷ ಜಗದೀಶ್ ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವುದೇ ರೋಟರಿ ಉದ್ದೇಶ. ಇಂಟರ‌್ಯಾಕ್ಟ್ ಸಂಸ್ಥೆ ಸೇರುವ ವಿದ್ಯಾರ್ಥಿಗಳು ಜವಾಬ್ದಾರಿ, ದೂರದೃಷ್ಟಿತ್ವ ಮತ್ತು ಸಾಮಾಜಿಕ ಕಳಕಳಿ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಇಂಟರ‌್ಯಾಕ್ಟ್ ಚೇರ್ಮನ್ ಬಿ.ಜಿ. ಅನಂತಶಯನ ಮಾತನಾಡಿ, ಶಾಲೆಯ ಜತೆಗಾರನೊಬ್ಬ ದುಃಖದಿಂದ ಕುಳಿತಿರುವಾಗ ಅವನ ಬೆನ್ನುತಟ್ಟಿ ಮಾತನಾಡಿಸುವುದು ಕೂಡ ಸೇವೆೆ. ಸೇವೆಯೊಂದಿಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಶಾಲೆ, ಕುಟುಂಬ ಮತ್ತು ದೇಶಕ್ಕೆ ಗೌರವ ತರುವ ರೀತಿ ಬಾಳಬೇಕೆಂದು ಹೇಳಿದರು.
ಶಾಲಾ ಅಧ್ಯಕ್ಷ ಸುಧೀರ್ ಮಾತನಾಡಿ, ಸೇವಾ ಮನೋಭಾವ ಎಂಬುದು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಬಂದರೆ ಮುಂದೆ ಅವರು ಉತ್ತಮ ನಾಯಕರಾಗಿ ಬೆಳಗುತ್ತಾರೆ ಎಂದರು.
ಪ್ರಾಂಶುಪಾಲೆ ಸತ್ಯ ಸುಲೋಚನಾ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಥೆ ರೋಟರಿಯ ಉದ್ದೇಶ ಸ್ವಹಿತ ಮೀರಿದ ಸೇವೆಯಾಗಿದೆ. ಸೇವಾ ಮನೋಭಾವ ಎಂಬುದು ವಿದ್ಯಾರ್ಥಿ ದೆಸೆಯಿಂದ ಕೊನೆತನಕವೂ ಇರಬೇಕು ಎಂದು ಆಶಿಸಿದರು.
ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಮಾತನಾಡಿ, ಇಂಟರ‌್ಯಾಕ್ಟ್ ಸದಸ್ಯರ ಎಲ್ಲ ಚಟುವಟಿಕೆಗಳಿಗೂ ಸಹಕಾರ ನೀಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಡಾ. ಚೇತನ್ ಹಾಗೂ ಸಂಚಾಲಕಿ ವಿನಿತಾ, ವಿದ್ಯಾರ್ಥಿನಿಗಳಾದ ಪುನರ್ವ, ದುವಿತ, ಸಿರೇನಾ ದೇಶಮ್ಮ, ತಾನ್ಯಾ ಜೋಸೆಫ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net