ರಾಯಲ್ಪಾಡು:ಕಲೆ, ಸಾಹಿತ್ಯದ ಬೇರು ಜಾನಪದ. ಅದನ್ನು ಉಳಿಸಿ ಬೆಳಸಬೇಕಾದದ್ದು ಎಲ್ಲರ ಕರ್ತವ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ ಹೇಳಿದರು.folklore
ಶ್ರೀನಿವಾಸಪುರ ತಾಲೂಕು ಪುಲಗೂರಕೋಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಾನಪದ ಕಲೆಗಳ ಪ್ರದರ್ಶನಕ್ಕೆ ಚಾಲನೆ ನೀಡಿ ವಾತನಾಡಿದರು.
ಪಾಶ್ಚಿವಾತ್ಯ ಸಂಸ್ಕೃತಿಗೆ ವಾರುಹೋಗುತ್ತಿರುವ ಸಂದರ್ಭದಲ್ಲಿ ಜಾನಪದಕ್ಕೆ ಗೌರವ ಸಿಗುತ್ತಿರುವುದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿ. ಜಾನಪದಕ್ಕೆ ಸಾವಿಲ್ಲ. ಅದು ನಶಿಸುವುದಿಲ್ಲ. ಆಧುನಿಕತೆಯ ನಡುವೆಯು ಈ ಕಲಾ ಪ್ರಕಾರಕ್ಕೆ ಎಲ್ಲರೂ ತಲೆದೂಗುತ್ತಾರೆ ಎಂದು ಹೇಳಿದರು.
ಭಾರತದಲ್ಲಿ ಸಾಕಷ್ಟು ಜ್ಞಾನವಿದ್ದರೂ ವಿದೇಶಿ ಅನುಕರಣೆಯಲ್ಲಿ ಜನರು ತೊಡಗಿದ್ದಾರೆ. ಇದನ್ನು ತಡೆದು ನಮ್ಮತನ ಉಳಿಸಬೇಕಿದೆ. ನಮ್ಮ ದೇಶದ ಯುವಕರು ಸ್ವಂತಿಕೆ ಬಿಟ್ಟು ಬ್ರಿಟಿಷರ ದಾಸ್ಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಲಾಖೆಯಿಂದ ನೋಂದಾಯಿತ ಕಲಾವಿದರಿಗೆ ವಾಸಶನ ಹಾಗೂ ಇತರೆ ಸವಲತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.
ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಾಸುದೇವ ವಾತನಾಡಿ, ಆಯಾಪ್ರದೇಶಕ್ಕೆ ತಕ್ಕಂತೆ ಗುರುಕುಲ ಪ್ರಾರಂಭಿಸಿ, ಗುರುಕುಲಗಳಿಗೆ ಮಕ್ಕಳನ್ನು ಕಳಹಿಸುವ ಪಾಲಕರಿಗೆ ಪ್ರೋತ್ಸಾಹಧನ ನೀಡಿ ಜಾನಪದ ಕಲೆ ಬೆಳಸಬೇಕು ಎಂದು ಹೇಳಿದರು.
ಜಾನಪದ ಕಲೆ ಸಾಹಿತ್ಯ, ಸಂಸ್ಕೃತಿ ಉಳಿಯುತ್ತಿರುವುದು ಗ್ರಾಮೀಣ ಭಾಗದಲ್ಲಿ ವಾತ್ರ. ಸರ್ಕಾರದ ವಾರ್ಗದರ್ಶನದಂತೆ ಗ್ರಾಮೀಣ ಭಾಗದ ಕಲಾವಿದರನ್ನು ಪೋಷಿಸುವ ಸಲುವಾಗಿ ಕಲಾವಿದರಿಗೆ ಸಂಗೀತ ಸಲಕರಣೆ ನೀಡುವಂತೆ ಒತ್ತಾಯಿಸಿದರು.
ಹಿರಿಯ ಕಲಾವಿದರಾದ ಕೋಟಬಲ್ಲಪಲ್ಲಿ ದಾಸು ವೀರಭದ್ರಪ್ಪ, ಮುನಿಯಪ್ಪ, ಗಂಗನ್ನಗಾರಿಪಲ್ಲಿ ಕೃಷ್ಣಮೂರ್ತಿ, ಗೊಲ್ಲಪಲ್ಲಿ ವೆಂಕಟಪ್ಪ, ತಂತಾರ್ಲಪಲ್ಲಿ ನರಸಿಂಹಮೂರ್ತಿ, ಪುಲಗೂರಕೋಟೆ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.