ಹೊಯ್ಸಳಕಟ್ಟೆಯಿಂದ ದಸೂಡಿಗೆ ರಸ್ತೆ ನಿರ್ಮಾಣ

Road construction from Hoysalakatte to Dasudi
Road construction from Hoysalakatte to Dasudi
Published on
ಹೊಯ್ಸಳಕಟ್ಟೆ: ಚಿಕ್ಕನಾಯಕನಹಳ್ಳಿ ತಾಲೂಕು ಗಡಿಭಾಗವಾದ ದಸೂಡಿ ಗ್ರಾಪಂನ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ನೀಡುವುದು ನನ್ನ ಜವಾಬ್ದಾರಿಯಾಗಿದೆ. ಈಗಾಗಲೇ ಈ ಭಾಗಕ್ಕೆ 10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ 1.5 ಕೋಟಿ ರೂ. ವೆಚ್ಚದಲ್ಲಿ ಈ ಭಾಗದ ಲಂಬಾಣಿ ತಾಂಡ್ಯಗಳು ಹಾಗೂ ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ದಸೂಡಿ ಗ್ರಾಪಂ ವ್ಯಾಪ್ತಿಯಲ್ಲಿ 26ನೇ ವಾರದ ಮನೆಬಾಗಿಲಿಗೆ ಮನೆ ಮಗ ಶೀರ್ಷಿಕೆಯಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ವಾತನಾಡಿ, ಈಗಾಗಲೇ ಪ್ರತಿವಾರದ ಜನಸ್ಪಂದನಾ ಕಾರ್ಯಕ್ರಮ 100 ವಾರಗಳನ್ನು ತಲುಪಿದೆ. ಈ ಜನಸ್ಪಂದನಾ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದಂತಹವರಿಗಾಗಿ ಹಾಗೂ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ನೇರವಾಗಿ ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸಲು ಈ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮ ಆಯೋಜಿಸಿದ್ದು, ಇದರ ಮೂಲಕ ನಿಮ್ಮ ವೈಯಕ್ತಿಕ ಹಾಗೂ ಸಾವಾಜಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಹೊಯ್ಸಳಕಟ್ಟೆಯಿಂದ ದಸೂಡಿಗೆ 10 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಿಸಲು ಕ್ರಮಕೈಗೊಳ್ಳಲಾಗಿದ್ದು, 1.5 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು. ಇದರೊಂದಿಗೆ ಈ ಭಾಗದ ರೈತರಿಗಾಗಿ ಜಾನುವಾರಗಳ ಆರೋಗ್ಯಕ್ಕಾಗಿ ಒಂದು ಪಶು ಆಸ್ಪತ್ರೆ ಮಂಜೂರು ವಾಡಿಸಿದ್ದು, ಮುಂದಿನ ದಿನಗಳಲ್ಲಿ ಕಟ್ಟಡವನ್ನು ನಿರ್ಮಿಸಲಾಗುವುದು ಎಂದರು.
ದಸೂಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ದಸೂಡಿ, ಬಲ್ಲಪ್ಪನಹಟ್ಟಿ, ಮರೇನಡು, ಮರೆನಡು ಪಾಳ್ಯ, ದಬ್ಬಗುಂಟೆ ಗ್ರಾಮಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ತಹಸೀಲ್ದಾರ್ ಮಮತಾ, ದಸೂಡಿ ಗ್ರಾಪಂ ನೊಡೆಲ್ ಅಧಿಕಾರಿ ಮೂರ್ತಿ, ಲೋಕೊಪಯೋಗಿ ಇಲಾಖೆಯ ಎಇಇ ತಿಮ್ಮಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್‌ಕುವಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ, ತಾಪಂ ವಾಜಿ ಸದಸ್ಯ ಪ್ರಸನ್ನಕುವಾರ್ ,ಪಿಡಿಒ ಮುದ್ದಲಿಂಗಯ್ಯ ಇದ್ದರು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net