ಬಸ್ ವ್ಯವಸ್ಥೆಗೆ ಆಗ್ರಹಿಸಿ ಸಂಚಾರ ತಡೆ

ಮುರಗೋಡ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ಸಂಚಾರ ತಡೆಯಲಾಯಿತು. ಮಹಾಂತೇಶ ಬೂದಗಟ್ಟಿ, ಈರಣ್ಣ ಕಂಬಳಿ, ಗುರು ಗಾಣಿಗೇರ, ಮಹಾಂತೇಶ ಕಾರಗಿ ಇತರರಿದ್ದರು.
ಮುರಗೋಡ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ಸಂಚಾರ ತಡೆಯಲಾಯಿತು. ಮಹಾಂತೇಶ ಬೂದಗಟ್ಟಿ, ಈರಣ್ಣ ಕಂಬಳಿ, ಗುರು ಗಾಣಿಗೇರ, ಮಹಾಂತೇಶ ಕಾರಗಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮುರಗೋಡ
ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು 2 ಗಂಟೆಗೂ ಹೆಚ್ಚು ಕಾಲ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ನಿತ್ಯ ಸಹಸ್ರಾರು ಉದ್ಯೋಗಸ್ಥರು, ವಿದ್ಯಾರ್ಥಿಗಳು ಗ್ರಾಮದಿಂದ ಬೈಲಹೊಂಗಲ ಸೇರಿ ವಿವಿಧೆಡೆ ತೆರಳುತ್ತಾರೆ. ಬೆಳಗ್ಗೆ 7ರಿಂದ ಯರಗಟ್ಟಿ, ಗೋಕಾಕ, ಸೊಗಲ ಹಾಗೂ ಸವದತ್ತಿ ಬಸ್ಸುಗಳು ಸಾಕಷ್ಟಿದ್ದರೂ ಪ್ರತಿ ಬಸ್‌ನಲ್ಲಿ 140ಕ್ಕೂ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಮುರಗೋಡದಲ್ಲಿ ನಿಲ್ಲಿಸದೆ ಹೋಗುತ್ತಿರುವುದರಿಂದ ಬಹಳ ತೊಂದರೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎರಡು ಗಂಟೆ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು.
ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಪ್ರತಿದಿನ ಬೆಳಗ್ಗೆ 7ರಿಂದ ಸಂಜೆವೆರೆಗೆ ಮುರಗೋಡಕ್ಕೆ ಹೆಚ್ಚುವರಿ ಬಸ್ ಒದಗಿಸಬೇಕೆಂದು ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಬೈಲಹೊಂಗಲ ಸಾರಿಗೆ ಡಿಪೋ ಅಧಿಕಾರಿಳಿಗೆ ದೂರವಾಣಿ ಮೂಲಕ ಮನವಿ ಸಲ್ಲಿಸಿದರು. ಅಧಿಕಾರಿಗಳು ಸಮ್ಮತಿ ಸೂಚಿಸಿದ ಬಳಿಕ ರಸ್ತೆಗೆ ಅಡ್ಡಲಾಗಿಟ್ಟಿದ್ದ ಕಲ್ಲುಗಳನ್ನು ತೆರವುಗೊಳಿಸಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿದರು.
ಹೆಚ್ಚುವರಿ ಬಸ್ ಪ್ರಾರಂಭಿಸಲು ಒತ್ತಾಯ: ಬೈಲಹೊಂಗಲ ಬಸ್ ಘಟಕದಿಂದ 11 ಕಿ.ಮೀ. ಅಂತರದಲ್ಲಿರುವ ಮುರಗೋಡ ಭಾಗದ ವಿದ್ಯಾರ್ಥಿಗಳು ಹಾಗೂ ಪ್ರಯಾಣಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೇವೆ ಬುಧವಾರದಿಂದ ಪುನರಾರಂಭಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಕೈಗೊಳ್ಳುವುದಾಗಿ ಸ್ಥಳೀಯರು ಎಚ್ಚರಿಸಿದರು.
ಮುಖಂಡರಾದ ಮಹಾಂತೇಶ ಬೂದಗಟ್ಟಿ, ಈರಣ್ಣ ಕಂಬಳಿ, ಗುರು ಗಾಣಿಗೇರ, ಮಹಾಂತೇಶ ಕಾರಗಿ, ಆರ್ೀ ನದ್ಾ, ಮಂಜು ನಾಯ್ಕರ, ಮಲ್ಲಿಕಾರ್ಜುನ ಬಡಿಗೇರ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net