ಬೆಳ್ಳಂಬೆಳಗ್ಗೆ ಕೂಲಿ ಕೆಲಸಕ್ಕೆ ಹೊರಟವರ ಮೇಲೆ ಜವರಾಯನ ಅಟ್ಟಹಾಸ: ಮೂವರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ! Road Accident

ರೋಣ ತಾಲೂಕಿನ ಜಿಗಳೂರ ಬಳಿ ಭೀಕರ ಅಪಘಾತ
ರೋಣ ತಾಲೂಕಿನ ಜಿಗಳೂರ ಬಳಿ ಭೀಕರ ಅಪಘಾತ
Published on

ಪ್ರಮುಖ ಮುಖ್ಯಾಂಶಗಳು

  • ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರಂತ ಸಾವು
  • ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರ ಬಳಿ ನಡೆದ ಅಪಘಾತ
  • ಕೂಲಿ ಕೆಲಸಕ್ಕೆಂದು ಗಜೇಂದ್ರಗಡದಿಂದ ರೋಣಕ್ಕೆ‌ ಕ್ರೂಸರ್​ ವಾಹನದಲ್ಲಿ ಕಾರ್ಮಿಕರು ಬರುತ್ತಿದ್ದರು
ರೋಣ: ಇಂದು (ಫೆ.05) ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ( Road Accident ) ಮೂವರು ದುರಂತ ಸಾವಿಗೀಡಾಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಿಗಳೂರ ಬಳಿ ನಡೆದಿದೆ.
ಮೃತರನ್ನು ಮರಿಮಬೀ ಹುನಗುಂದ, ಅನ್ನಪೂರ್ಣ ಬಾಗೋಜಿ ಹಾಗೂ ಸುಜಾತಾ ಹೊಸಮನಿ ಎಂದು ಗುರುತಿಸಲಾಗಿದೆ. 
ಇಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಗಜೇಂದ್ರಗಡದಿಂದ ರೋಣಕ್ಕೆ‌ ಕ್ರೂಸರ್​ ವಾಹನದಲ್ಲಿ ಕಾರ್ಮಿಕರು ಬರುತ್ತಿದ್ದರು. ಜಿಗಳೂರ ಬಳಿ ಬರುತ್ತಿದ್ದಂತೆ ಟ್ಯಾಂಕರ್​ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆರು ಜನರನ್ನು ಗದಗದ ಜಿಮ್ಸ್​ಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ರೋಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರೀಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net