ಮನೆಯಲ್ಲಿ ಕುಳಿತು ಇಕೆವೈಸಿ ಪೂರ್ಣಗೊಳಿಸಲು ಇಲಾಖೆ, ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಿಂದ ‘ಮೇರಾ ರೇಷನ್’ ಅಥವಾ ‘ಮೇರಾ ಇಕೆವೈಸಿ’ ಆ್ಯಪ್ ಡೌನ್‌ಮಾಡಿಕೊಳ್ಳಬೇಕು. ಇದರ ಜತೆಗೆ ಮುಖದ ಗುರುತು ಪತ್ತೆ ಹಚ್ಚಲು ‘ಆಧಾರ್ ಪೇಸ್-ಆರ್‌ಡಿ’(ಎಇಪಿಡಿಎಸ್) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ, ಮೇರಾ ರೇಷನ್’ ಆ್ಯಪ್‌ನಲ್ಲಿ ಆಧಾರ್ ಸಂಖೆ ನಮೂದಿಸಬೇಕು. ನಂತರ, ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಲಾಗಿನ್ ಆದ ನಿಮ್ಮ ಕುಟುಂಬದ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಹೆಸರುಗಳು ಕಾಣಿಸಲಿವೆ.