ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿನ ಉನ್ನತ ಶಿಕ್ಷಣವು ಸವಾಲಿನಿಂದ ಕೂಡಿರಲಿದೆ. ವಾಸ್ತವ ಜಗತ್ತನ್ನು ತೆರೆದಿಡುವ, ಪರಿವರ್ತನೆ ಮಾಡುವ ಕೆಲಸವಾಗಲಿದೆ. ಆರ್‌ಐಎಸ್‌ಎಂನಲ್ಲಿ ಜಾಗತಿಕ ಸಮಾಜವನ್ನು ನೋಡುವ ಹಾಗೂ ಕೃತಕ ಬುದ್ಧಿಮತ್ತೆಗೆ ಆದ್ಯತೆ ನೀಡಲಾಗುತ್ತದೆ. ಸೈಬರ್ ಭದ್ರತೆ, ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಸೇರಿ ಹಲವು ಕ್ಷೇತ್ರಗಳ ಮೇಲೆ ಆರ್‌ಐಎಸ್‌ಎಂ ಅಧ್ಯಯನ, ವ್ಯಾಸಂಗ ಮತ್ತು ಸಂಶೋಧನಾ ಚಟುವಟಿಕೆಗಳನ್ನು ನಡೆಸಲಿದೆ. ಸಂಶೋಧನೆ, ಪಠ್ಯಕ್ರಮ, ಬೋಧಕ ಸಿಬ್ಬಂದಿ ಮತ್ತು ತರಬೇತಿ ವಿಚಾರದಲ್ಲಿ ಜ್ಞಾನ ವಿನಿಯಮವಾಗಲಿದೆ. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.