ಅಜೀಂ ಪ್ರೇಮ್​ ಜೀ ವಿವಿಯಲ್ಲಿ ಗದ್ದಲ / SARJAPUR

ಸರ್ಜಾಪುರಕಾಲೇಜಿನ ನಾಮಫಲಕಗಳಿಗೆ ಮಸಿ ಬಳಿದು, ತ್ರಿವರ್ಣ ಧ್ವಜ ಹಿಡಿದು ಕಾಲೇಜು ಮುಂಭಾಗದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ದೇಶವಿರೋಧಿ ಮತ್ತು ಸೈನ್ಯ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಸರ್ಜಾಪುರಕಾಲೇಜಿನ ನಾಮಫಲಕಗಳಿಗೆ ಮಸಿ ಬಳಿದು, ತ್ರಿವರ್ಣ ಧ್ವಜ ಹಿಡಿದು ಕಾಲೇಜು ಮುಂಭಾಗದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ದೇಶವಿರೋಧಿ ಮತ್ತು ಸೈನ್ಯ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
Published on
ಸರ್ಜಾಪುರ : ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ಬಳಿಯಿರುವ ಅಜೀಂ ಪ್ರೇಮ್​ ಜೀ ಯುನಿವರ್ಸಿಟಿ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ ಮಂಗಳವಾರ ಪ್ರತಿಭಟನೆ ನಡೆಸಿತು. ವಿಶ್ವವಿದ್ಯಾಲಯದಲ್ಲಿ ಸೈನಿಕರ ವಿರುದ್ಧ ಕಾರ್ಯಕ್ರಮ ಆಯೋಜನೆಗೊಂಡಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಬಿವಿಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಕಾಲೇಜಿನ ನಾಮಫಲಕಗಳಿಗೆ ಮಸಿ ಬಳಿದು, ತ್ರಿವರ್ಣ ಧ್ವಜ ಹಿಡಿದು ಕಾಲೇಜು ಮುಂಭಾಗದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ದೇಶವಿರೋಧಿ ಮತ್ತು ಸೈನ್ಯ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಇತ್ತೀಚಿನ ದಿನಗಳಲ್ಲಿ ಸೈನ್ಯ ವಿರೋಧಿ ಹಾಗೂ ಕಾಶ್ಮೀರ ಪ್ರತ್ಯೇಕತಾವಾದಿಗಳ ಪರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆಕ್ರೋಶ ವ್ಯಕ್ತವಾಗಿದ್ದು, ಫೆ.26, 27 ಮತ್ತು 28ರಂದು ಆಯೋಜಿಸಿರುವ ಸಾಂಸತಿಕ ಕಾರ್ಯಕ್ರಮಗಳ ನೆಪದಲ್ಲಿ ದೇಶವಿರೋಧಿ ಕಾರ್ಯಕ್ರಮ ಡೆಸಲಾಗುತ್ತಿದೆ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದರು.
ಇದಕ್ಕೆ ಪ್ರತಿಯಾಗಿ ವಿಶ್ವವಿದ್ಯಾಲಯದ ಸ್ಪಾರ್ಕ್​ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಪ್ಯಾಲೆಸೆನ್​ ಪರ ಘೋಷಣೆ ಕೂಗಿದರು. ಈ ವೇಳೆ ಎರಡೂ ಸಂಘಟನೆಗಳ ನಡುವೆ ಪರಸ್ಪರ ಘೋಷಣೆ ಕೂಗಾಟ ನಡೆಯಿತು. ಸ್ಪಾರ್ಕ್​ ವಿದ್ಯಾರ್ಥಿಗಳು ಎಬಿವಿಪಿ ವಿದ್ಯಾರ್ಥಿಗಳತ್ತ ಚಪ್ಪಲಿ ತೂರಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ, ಎಬಿವಿಪಿ ಸಂಘಟನೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಎರಡೂ ಗುಂಪುಗಳ ವಿದ್ಯಾರ್ಥಿಗಳನ್ನು ಚದುರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net