ಬೆಳಗಾವಿ: ಬೈಕ್ ಮೇಲಿಂದ ಬಿದ್ದ ಸವಾರನ ತಲೆ ಮೇಲೆ ಟ್ಯಾಂಕರ್ ಹಾಯ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಶಹಾಪುರ ನಾಥ ಪೈ ಸರ್ಕಲ್‌ನಲ್ಲಿ ನಡೆದಿದೆ. .ಹಿಂದವಾಡಿಯ ಗಣೇಶ ರೋಡಗಿ(22) ಮೃತ ಬೈಕ್ ಸವಾರ. ಹಿಂಬದಿ ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದವಾಡಿ ಕಡೆಗೆ ಹೊರಟಿದ್ದಾಗ, ಕಾರಿಗೆ ತಾಗಿ ಗಣೇಶ ಬೈಕ್ ಮೇಲಿಂದ ಬಿದ್ದಿದ್ದಾನೆ..ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ತಲೆ ಮೇಲೆ ಹಾಯ್ದಿದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ದಕ್ಷಿಣ ಠಾಣೆ ಪೊಲೀಸರು ತಿಳಿಸಿದ್ದಾರೆ.