ಸಣ್ಣ ನೀರಾವರಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ದೊಡ್ಡಯ್ಯ ಮಾತನಾಡಿ, ಅಮಾನಿಕೆರೆಯಲ್ಲಿ 1,100 ಮೀಟರ್ ಉದ್ದದ ಏರಿಯನ್ನು ಇಲಾಖಾ ಮಾನದಂಡಗಳಂತೆ ಹಾರ್ಟಿಂಗ್ ಮತ್ತು ಕೇಸಿಂಗ್ನಿಂದ ಅಭಿವೃದ್ಧಿ, ಕೆರೆಯ ಏರಿಗೆ ರಿವಿಟ್ಮೆಂಟ್ ಮತ್ತು ಟರ್ಫಿಂಗ್ ಅಳವಡಿಕೆ, ಸೋಪಾನಗಳ ನಿಮಾರ್ಣ, ಫೆನ್ಸಿಂಗ್ ದುರಸ್ತಿ ಕಾಮಗಾರಿ ಮತ್ತು ಏರಿಯ ಮೇಲ್ಬಾಗದ ವಾಕಿಂಗ್ಪಾಥ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ಇದರಿಂದ ಕೆರೆ ಸುತ್ತಲಿನ ಪ್ರದೇಶಗಳಿಗೆ ಕೆರೆ ನೀರು ಸೋರಿಕೆ ತಡೆಗಟ್ಟಿದಂತಾಗುತ್ತೆ ಎಂದರು.