ನಗರ ಪ್ರದೇಶಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಮಾಹಿತಿ ಸಂಗ್ರಹಿಸುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಭದ್ರತಾ ವ್ಯವಸ್ಥೆ, ನಿವಾಸಿಗಳು ಮನೆಯಲ್ಲಿ ಲಭ್ಯವಿಲ್ಲದಿರುವುದು ಹಾಗೂ ಪ್ರವೇಶಕ್ಕೆ ನಿರ್ಬಂಧ ಇರುವ ಕಾರಣ ಪರಿಶೀಲನಾ ಕಾರ್ಯ ವಿಳಂಬವಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.