ಸ್ಮಶಾನಕ್ಕೆ ಹೋದ ಹೆಣದಂತೆ! : ಪುರಸಭೆಯ ಸದಸ್ಯರೊಬ್ಬರು ಹೇಳಿರುವ ಮಾತು ಇಲ್ಲಿನ ನೈಜ ಸ್ಥಿತಿ ಬಿಚ್ಚಿಡುತ್ತದೆ. ಒಮ್ಮೆ ಹಣ ಕಟ್ಟಿದ ಮೇಲೆ ರಸೀದಿ ಮಿಸ್ ಆದ್ರೆ ಮುಗೀತು. ಆ ಹಣ ಮರಳಿ ಸಿಗುವುದು ಅಸಾಧ್ಯ ಎನ್ನುವ ಉಡಾಫೆ ಉತ್ತರಗಳು ಆಡಳಿತ ಮಂಡಳಿ ಅಮಾನವೀಯತೆಗೆ ಸಾಕ್ಷಿಯಾಗಿವೆ. ಈ ಹಿಂದೆ ಮಾಜಿ ಅಧ್ಯಕ್ಷ ಎ.ಒ.ಸತೀಶ್ ಕುಮಾರ್ ಮತ್ತು ಸಿ.ಎಂ.ರಾಮ್ ಅವರು ಧರಣಿ ನಡೆಸಿದ್ದರೂ, ಇಲ್ಲಿನ ಅಧಿಕಾರಿಗಳ ಮೊಂಡುತನ ಮಾತ್ರ ಕಡಿಮೆಯಾಗಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ ಸತೀಶ್ ಕುಮಾರ್ ಹೇಳಿದರು.