ನಿವೃತ್ತಿ ಸೇವೆಯ ಅಂತ್ಯವಲ್ಲ, ಸಮಾಜ ಸೇವೆಗೆ ಹೊಸ ಅಧ್ಯಾಯ social service

ನಿವೃತ್ತಿ ಸೇವೆಯ ಅಂತ್ಯವಲ್ಲ, ಸಮಾಜ ಸೇವೆಗೆ ಹೊಸ ಅಧ್ಯಾಯ social service
ನಿವೃತ್ತಿ ಸೇವೆಯ ಅಂತ್ಯವಲ್ಲ, ಸಮಾಜ ಸೇವೆಗೆ ಹೊಸ ಅಧ್ಯಾಯ social service
Published on
ಬೂದಿಕೋಟೆ: ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ನಿಷ್ಠೆ ಮತ್ತು ಜನಪರ ಕಾಳಜಿಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳು ನಿವೃತ್ತಿಯ ನಂತರವೂ ಸಮಾಜಕ್ಕೆ ಮಾರ್ಗದರ್ಶಕರಾಗಿರುತ್ತಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುಚಂದ್ರ ಹೇಳಿದರು.social service
ಬೂದಿಕೋಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕಿಶೋರ್​ ಕುಮಾರ್​ ಅವರ ವಯೋನಿವೃತ್ತಿ ಅಂಗವಾಗಿ ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಿಶೋರ್​ ಕುಮಾರ್​ ಅವರು ತಮ್ಮ ಸೇವಾ ಅವಧಿಯಲ್ಲಿ ಗ್ರಾಮಾಭಿವೃದ್ಧಿ, ಸಾರ್ವಜನಿಕ ಸಮಸ್ಯೆಗಳ ಪರಿಹಾರ ಹಾಗೂ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ನಿವೃತ್ತಿ ಎನ್ನುವುದು ಕೇವಲ ಸರ್ಕಾರಿ ಸೇವೆಯಿಂದ ದೂರವಾಗುವುದಷ್ಟೇ ಹೊರತು, ವ್ಯಕ್ತಿಯ ಅನುಭವ ಮತ್ತು ಜ್ಞಾನಕ್ಕೆ ಯಾವುದೇ ನಿವೃತ್ತಿ ಇಲ್ಲ. ತಮ್ಮ ಅನುಭವವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net