ಶಿಕ್ಷಕರಾಗಿದ್ದ ಸಿದ್ದಪ್ಪ ಅಂಬುಟಗಿ ಎರಡು ವರ್ಷಗಳ ಹಿಂದೆ ನಿವೃತ್ತರಾಗಿ ಮನೆಯಲ್ಲಿಯೇ ಇರುತ್ತಿದ್ದರು. ಕುಟುಂಬ ವಿಚಾರವಾಗಿ ಹಲವು ಮನಸ್ಥಾಪಗಳಿದ್ದವು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಆಗಸ್ಟ್ 15ರ ರಾತ್ರಿ 11 ಗಂಟೆಯಿಂದ 16ರ ಬೆಳಗಿನ 6 ಗಂಟೆ ನಡುವಿನ ಅವಧಿಯಲ್ಲಿ ಕೊಲೆ ಘಟನೆ ನಡೆದಿರುವ ಸಾಧ್ಯತೆ ಇದ್ದು, ಮತದೇಹದ ಜೊತೆಗೆ ಮನೆಯ ಬೆಡ್‌ಶೀಟ್ ಹಾಗೂ ತಲೆದಿಂಬಿನ ಕವರ್ ಇರುವುದೂ ಕಂಡುಬಂದಿದೆ. ತಲೆ, ಎದೆ ಸೇರಿ ದೇಹದ ವಿವಿಧ ಭಾಗಗಳಲ್ಲಿ ರಕ್ತಗಾಯಗಳಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.