ಬುದ್ಧಿಮಾಂದ್ಯ ಮಹಿಳೆ ನೋವಿಗೆ ಸ್ಪಂದನೆ

ಬಸವಲ್ಯಾಣದಲ್ಲಿ ನಾಯಿ ಕಡಿತದ ನೋವಿನಿಂದ ನರಳುತ್ತಿದ್ದ ಬುದ್ಧಿಮಾಂದ್ಯ ಮಹಿಳೆಗೆ ಚಿಕಿತ್ಸೆ ನೀಡಿ ಮಾನವೀಯ ಮೆರೆದ ಲೋಕೇಶ ಮೊಳಕೇರೆ ಜತೆ ಜಾಕೋಬ್​ ಜಯಪ್ರಭು, ಸ್ಟಾಫ್​ ನರ್ಸ್​ ಅಮೃತ, ಸುಗಂಧಾ ಇತರರಿದ್ದರು.
ಬಸವಲ್ಯಾಣದಲ್ಲಿ ನಾಯಿ ಕಡಿತದ ನೋವಿನಿಂದ ನರಳುತ್ತಿದ್ದ ಬುದ್ಧಿಮಾಂದ್ಯ ಮಹಿಳೆಗೆ ಚಿಕಿತ್ಸೆ ನೀಡಿ ಮಾನವೀಯ ಮೆರೆದ ಲೋಕೇಶ ಮೊಳಕೇರೆ ಜತೆ ಜಾಕೋಬ್​ ಜಯಪ್ರಭು, ಸ್ಟಾಫ್​ ನರ್ಸ್​ ಅಮೃತ, ಸುಗಂಧಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೆರವಿಗೆ ಮುಂದಾಗಿ ಮಾನವೀಯತೆ ಮೆರೆದ ಸಮಾಜ ಸೇವಕ ಲೋಕೇಶ ಮೊಳಕೇರೆ
ಬಸವಕಲ್ಯಾಣ: ನಾಯಿ ಕಡಿತದ ನೋವಿನಿಂದ ನರಳುತ್ತಿದ್ದ ಬುದ್ಧಿಮಾಂದ್ಯ ಮಹಿಳೆಯೊಬ್ಬಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆಯಲಾಗಿದೆ.
ಶ್ರಾವಣ ಮಾಸದ ಮೊದಲ ಸೋಮವಾರ ಜತೆಗೆ ಮಹಿಳೆಯರ ಹಬ್ಬ ನಾಗರಪಂಚಮಿ. ಎಲ್ಲ ಹೆಣ್ಮಕ್ಕಳು ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದರೆ, ನಗರದ ಮುಖ್ಯ ರಸ್ತೆ ಬದಿಯ ಹಳೆಯ ಬಿಇಒ ಕಚೇರಿ ಬಳಿ ಬಸ್​ ಪ್ರಯಾಣಿಕರಿಗಾಗಿ ಹಾಕಿರುವ ತಾತ್ಕಾಲಿಕ ಶೆಡ್​ನಲ್ಲಿ ಖುರ್ಚಿ ಮೇಲೆ ಕುಳಿತು ನೋವು ತಾಳಲಾರದೆ ಈಕೆ ಅಳುತ್ತ ನೆರವಿಗಾಗಿ ಅಂಗಲಾಚುತ್ತಿದ್ದಳು. ಇದನ್ನು ಗಮನಿಸಿದ ಸಮಾಜ ಸೇವಕ ಲೋಕೇಶ ಮೊಳಕೇರೆ ತಕ್ಷಣ ಆಂಬುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆಗೆ ಮೆರೆದಿದ್ದಾರೆ. ಜಾಕೋಬ್​ ಜಯಪ್ರಭು ಸಾಥ್​ ನೀಡಿದ್ದಾರೆ.
ಸ್ಟಾಫ್​ನರ್ಸ್​ ಅಮೃತ, ಸೆರ್ಲಿನ್​ ಮೇರಿ ಹಾಗೂ ಸುಗಂಧಾ ಇತರರ ನೆರವಿನಿಂದ ಬುದ್ಧಿಮಾಂದ್ಯಳಿಗೆ ಸ್ನಾನ ಮಾಡಿಸಿ ಕೈಬೆರಳ ಉಗುರು ತೆಗೆಸಿ ಹೊಸ ಬಟ್ಟೆ ತರಿಸಿ ಕೊಡಿಸಲು ಲೋಕೇಶ ವ್ಯವಸ್ಥೆ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ಈಕೆಗೆ ಎರಡು ವಾರದ ಹಿಂದೆ ನಾಯಿ ಕಡಿದಿದ್ದು, ಯಾರೋ ಚಿಕಿತ್ಸೆ ಕೊಡಿಸಿದ್ದರು. ಆದರೆ ಬೆರಳಿಗೆ ತೀವ್ರ ಗಾಯವಾಗಿ ಕೊಳೆತ ಸ್ಥಿಯಲ್ಲಿದ್ದು, ಹುಳುಗಳು ಆವರಿಸಿದ್ದವು. ಹೀಗಾಗಿ ನೋವು ತಾಳದೆ ನರಳುತ್ತಿದ್ದಳು. ಚಿಕಿತ್ಸೆ ಬಳಿಕ ಹೊಸ ಬಟ್ಟೆ ತೊಟ್ಟು ನಿಟ್ಟಸಿರು ಬಿಟ್ಟಿದ್ದಾಳೆ. ರಸ್ತೆ ಬದಿ ಅಲೆದಾಡುವ ಈಕೆ ವಾಸಕ್ಕೆ ಸಂಬಂಧಿತರು ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ.
"

ಅಸಹಾಯಕರಿಗೆ ನೆರವಾಗುವುದು ಮಾನವೀಯ ಕರ್ತವ್ಯ. ನೋವಿನಿಂದ ನರಳುತ್ತಿದ್ದ ಬುದ್ಧಿಮಾಂದ್ಯಳನ್ನು ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಿದ್ದು, ಕಾಳಜಿ ವಹಿಸಿ ಚಿಕಿತ್ಸೆ ನೀಡಿದ ತಾಲೂಕು ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದಗಳು.

— > ಲೋಕೇಶ ಮೊಳಕೇರೆ ಸಮಾಜ ಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net