ಪ್ರಜಾಸೌಧ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ವಿಪತ್ತು ನಿರ್ವಾಹಣಾ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿಮ್ಮನಚೋಡದ ಸುಂದರ ನಗರ, ಚಿಮ್ಮಾಇದಲಾಯಿ, ದಸ್ತಾಪುರ, ಕುಸರಂಪಳ್ಳಿ, ಬಿಕ್ಕುನಾಯಕ ತಾಂಡಾ, ಬಾವನಗುಡಿ ತಾಂಡಾ, ಲಚ್ಚುನಾಯಕ ತಾಂಡಾ, ಗೋಪು ನಾಯಕ ತಾಂಡಾ, ಬೆನಕೆಪಳ್ಳಿ, ಮೋನುನಾಯಕ ತಾಂಡಾ, ಕಲಬಾವಿ ತಾಂಡಾ, ಧರ್ಮಸಾಗರ ಸೇರಿ ವಿವಿಧೆಡೆ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಭೇಟಿ ನೀಡಿ ಸಮರ್ಪಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.