ಜನರ ಸಮಸ್ಯೆಗೆ ಸಕಾಲಕ್ಕೆ ಸ್ಪಂದಿಸಿ

ಯಾದಗಿರಿಯಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್​ ತುಕರಾಮ ಪಾಂಡ್ವೆ ಮಾತನಾಡಿದರು. ಜಿಪಂ ಸಿಇಒ ಲವೀಶ್​ ಒರ್ಡಿಯಾ, ಎಡಿಸಿ ರಮೇಶ ಕೋಲಾರ ಇತರರಿದ್ದರು.
ಯಾದಗಿರಿಯಲ್ಲಿ ಸೋಮವಾರ ಕರೆದಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ರಾಹುಲ್​ ತುಕರಾಮ ಪಾಂಡ್ವೆ ಮಾತನಾಡಿದರು. ಜಿಪಂ ಸಿಇಒ ಲವೀಶ್​ ಒರ್ಡಿಯಾ, ಎಡಿಸಿ ರಮೇಶ ಕೋಲಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ರಾಹುಲ್​ ಪಾಂಡ್ವೆ ಸೂಚನೆ
  • ಯಾದಗಿರಿ ಡಿಸಿ ಕಚೇರಿಯಲ್ಲಿ ಸಭೆ
ಯಾದಗಿರಿ: ಜಿಲ್ಲೆಯಲ್ಲಿ ಕುಡಿವ ನೀರಿನ ಸಮರ್ಪಕ ನಿರ್ವಹಣೆ, ಇಲಾಖಾ ವ್ಯಾಪ್ತಿಯಲ್ಲಿ ಸಮಗ್ರ ಕ್ರಿಯಾ ಯೋಜನೆ, ಕರ್ತವ್ಯ ಆ್ಯಪ್​ನಲ್ಲಿ ಕಡ್ಡಾಯ ನೋಂದಣಿ ಸೇರಿ ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ರಾಹುಲ್​ ತುಕಾರಾಮ ಪಾಂಡ್ವೆ ಸೂಚಿಸಿದರು.
ಮುಖ್ಯಮಂತ್ರಿಗಳ ಅಧ್ಯತೆಯಲ್ಲಿ ಇತ್ತೀಚೆಗೆ ಬೆಂಗಳೂರನಲ್ಲಿ ಕರೆದಿದ್ದ ಎಲ್ಲ ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸ್​ಪಿ ಹಾಗೂ ಜಿಲ್ಲಾ ಪೋಲಿಸ್​ ವರಿಷ್ಠಾಧಿಕಾರಿಗಳು ಹಾಗೂ ಉಪ ಸಂರಣಾಧಿಕಾರಿಗಳ ಸಭೆಯಲ್ಲಿ ಕೈಗೊಂಡ ರ್ನಿಣಯಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ್ದಿ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾರತ್​ ಜೋಡೋ ಯುವಕ್ಲಬ್​ಗಳ ರಚನೆಗೆ ಸೂಚಿಸಲಾಗಿದ್ದು, ಸರ್ಕಾರದಿಂದ ಸೂಕ್ತ ಮಾರ್ಗಸೂಚಿ ಬರಲಿವೆ. ಜಾತ್ಯಾತಿತ ಭಾವನೆ, ನಾಯಕತ್ವ, ಉದ್ಯೋಗ, ಕ್ರೀಡೆ, ಫಿಟ್ನೆಸ್​ ಹಾಗೂ ಸಮುದಾಯ ಸೇವೆ ಆಲೋಚನೆ ಈ ಅಭಿಯಾನದಡಿ ಅಡಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಸಜ್ಜುಗೊಳ್ಳುವಂತೆ ತಾಕೀತು ಮಾಡಿದರು.
ಸಾರ್ವಜನಿಕ ಅಹವಾಲುಗಳನ್ನು ನಿಗದಿತ ಅವಧಿಯೊಳಗೆ ಶ್ರೀ ವಿಲೇವಾರಿಗೆ ಗಮನ ಹರಿಸಬೇಕು. ಐಪಿಜಿಆರ್​ಎಸ್​, ಸಕಾಲ, ಇತರೆ ಕುಂದುಕೊರತೆ ಅರ್ಜಿಗಳನ್ನು ತಣ ವಿಲೇವಾರಿ ಮಾಡಬೇಕು. ಜನಸ್ಪಂದನ ಮೂಲಕ ಪರಿಹರಿಸುವ ಉದ್ದೇಶ ಸಹ ಹೊಂದಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ತಿಳಿಸಿದರು.
ಮುಖ್ಯಮಂತ್ರಿಗಳು ಸೂಚಿಸಿದಂತೆ ಭೂ&ಗ್ಯಾರಂಟಿ ಅಭಿಯಾನದಡಿ ಬಿ&ಖಾತಾದಿಂದ ಎ ಖಾತಾಗೆ ಸಮಗ್ರ ಪರಿವರ್ತನೆಗೆ ಕ್ರಮ ಆಗಬೇಕು. ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಬೇಕು ಜಮೀನುಗಳ ಆರ್​ಟಿಸಿ ಅನುಷ್ಠಾನ, ಬಾಕಿ ಇರುವ ಕುರಿತು ಮುಂದಿನ ಹತ್ತು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್​ ಒರ್ಡಿಯಾ, ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಇತರರಿದ್ದರು.
ಅಭಿಯಾನಗಳ ನಿರ್ವಹಣೆಗೆ ಸಮಿತಿ ರಚನೆ
ಸಾರ್ವಜನಿಕ ಕುಂದು&ಕೊರತೆ ವಿಲೇವಾರಿ ಹಾಗೂ ಸರ್ಕಾರ ನಿರ್ಧರಿಸಿದ ಪ್ರತಿ ಅಭಿಯಾನಗಳ ನಿರ್ವಹಣೆಗೆ ಸಮಿತಿ ರಚಿಸಲಾಗುವುದು. ಕಾಲ ಕಾಲಕ್ಕೆ ಈ ಕುರಿತು ಪರಿಶೀಲಿಸಲಾಗುವುದು ಎಂದ ಅವರು, ಪ್ರತಿ ಇಲಾಖಾ ವ್ಯಾಪ್ತಿಯಲ್ಲಿ ತಮ್ಮ ಕೆಲಸಗಳು, ಯೋಜನೆಗಳ ಕುರಿತು ಸಿಟಿಜನ್ಸ್​ ಚಾರ್ಟರ್​ ನ್ನು ಮುಂದಿನ ಹತ್ತು ದಿನಗಳಲ್ಲಿ ಅಳವಡಿಸಬೇಕು. ಕಚೇರಿಗಳ ಸ್ವಚ್ಛತೆ, ವಿದ್ಯುತ್​ ಸೌಕರ್ಯ, ವಿದ್ಯುತ್​ ಬ್ಯಾಕ್​ಅಪ್​ ಸೌಲಭ್ಯ, ಶಾಲಾ&ಕಾಲೇಜು, ಆಸ್ಪತ್ರೆಗಳು, ವಸತಿ ನಿಲಯಗಳು, ಬಸ್​ ನಿಲ್ದಾಣ ಹಾಗೂ ಕಚೇರಿಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಸಸಿಗಳನ್ನು ನೆಟ್ಟು ಹಸರೀಕರಣಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯಿಂದ ಗರಿಷ್ಠ ನೋಂದಣಿ ಮಾಡಿ
ಮುಂಬರುವ ದಿನಗಳಲ್ಲಿ ಯುವ ಉದ್ಯೋಗ ಸೇತು ಮಿಷನ್​, ಜಿಲ್ಲೆಯಿಂದ ಗರಿಷ್ಠ ಉದ್ಯೋಗ ನೋಂದಣಿ, ಒಂದು ಬಾರಿ ವಿದ್ಯುತ್​ ಸಂಪರ್ಕ ಪರಿಹಾರ, ಲಾಂತರ ಮನೆಗಳನ್ನು ಔಪಚಾರಿಕ ವಿದ್ಯುತ್​ ಜಾಲಕ್ಕೆ ತರುವುದು, ಎಐ ಆಧಾರಿತ ಏಕೀಕೃತ ಹಾಗೂ ಸಮಗ್ರ ದೂರು ಪರಿಹಾರ ವ್ಯವಸ್ಥೆಗಳ ಕುರಿತು ಮಾರ್ಗಸೂಚಿ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಾಂಡ್ವೆ ಸೂಚಿಸಿದರು. ಕರ್ತವ್ಯ ಆ್ಯಪ್​ನಲ್ಲಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ನೋಂದಣಿ ಮಾಡುವಂತೆ ನೋಡಿಕೊಳ್ಳಲು ಸೂಚನೆ ನೀಡಿದ ಅವರು, 371 (ಜೆ )ರಡಿ ಇಲಾಖಾವಾರು ಖಾಲಿ ಇರುವ ಗ್ರೂಪ್​ ಸಿ ಹಾಗೂ ಡಿ ಹುದ್ದೆಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net