ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ, ಶೇ.50ರ ಮೀಸಲಾತಿಯ ಹಳೆಯ ಅಧಿಸೂಚನೆ ಪ್ರಕಾರ ಸರ್ಕಾರ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಬಹುದು. ನ್ಯಾಯಾಲಯವು ಅಂತಿಮ ತೀರ್ಪು ನೀಡುವವರೆಗೆ ಹೆಚ್ಚುವರಿ ಶೇ.6 ಮೀಸಲಾತಿಯನ್ನು ಅನ್ವಯಿಸಿ ಯಾವುದೇ ಹೊಸ ಅಧಿಸೂಚನೆ ಹೊರಡಿಸುವಂತಿಲ್ಲ. ಸರ್ಕಾರ ಶೇ.94 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ, ಉಳಿದ ಶೇ.6 ಹುದ್ದೆಯನ್ನು ನ್ಯಾಯಾಲಯದ ಅಂತಿಮ ತೀರ್ಪಿನ ನಂತರ ಭರ್ತಿ ಮಾಡುವುದಾಗಿ ಅಫಿಡವಿತ್ ಸಲ್ಲಿಸಿದರೆ ಆ ಬಗ್ಗೆ ಪರಿಶೀಲಿಸಲಾಗುವುದು ಎಂದಿತು. ಆಗ ಪ್ರತಿಕ್ರಿಯಿಸಿದ ಎಜಿ, ಸರ್ಕಾರದಿಂದ ಸೂಚನೆ ಪಡೆಯುವುದಾಗಿ ತಿಳಿಸಿದರು. ಮಧ್ಯಂತರ ಪರಿಹಾರಕ್ಕಾಗಿ ಸರ್ಕಾರ ಅರ್ಜಿ ಸಲ್ಲಿಸಬಹುದು ಎಂದ ನ್ಯಾಯಪೀಠ, ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿತು.