

ಪ್ರಮುಖ ಮುಖ್ಯಾಂಶಗಳು
ಆರ್.ಆರ್.ನಗರ: ಸಂವಿಧಾನದಮೂಲ ಧ್ಯೇಯೋದ್ದೇಶವಾದ ಸಮಾನತೆಯನ್ನುಸರ್ವರಿಗೂ ಖಾತ್ರಿ ಪಡಿಸುವಉದ್ದೇಶದಿಂದ ಕೆಲ ದಮನಿತ ವರ್ಗಗಳಿಗೆಮೀಸಲಾತಿಯಡಿ ವಿಶೇಷ ಅವಕಾಶಗಳನ್ನು ಕಲ್ಪಿಸಲಾಗಿದೆ.ಮೀಸಲಾತಿ ಕರುಣೆಯಕೊಡುಗೆಯಲ್ಲ ಅದು ಸಮಾನತೆಯ ಹಾದಿಎಂದು ಜಿಲ್ಲಾ ಹಾಗೂ ಸೆಷನ್ಸ್ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗೋಪಾಲ್ ಎಸ್.ಶೆಟ್ಟಿಅಭಿಪ್ರಾಯಿಸಿದರು.
ಮಲ್ಲತ್ತಹಳ್ಳಿಯಎ.ಐ.ಟಿ.ಕಾಲೇಜಿನಲ್ಲಿಆಯೋಜಿಸಲಾಗಿದ್ದ ಅಂಬೇಡ್ಕರ್ 135ನೇಜಯಂತಿ ಹಾಗೂ 10ನೇರಾಷ್ಟ್ರೀಯ ತಾಂತ್ರಿಕ ಪ್ರದರ್ಶನದಲ್ಲಿ ಮಾತನಾಡಿದರು.ಕ್ರಾಂತಿ ಪುರುಷರಚಿಂತನೆ ಹಾಗೂ ಆದರ್ಶಗಳು ನಮ್ಮದೈನಂದಿನ ಬದುಕಿನಲ್ಲಿ ಪಾಲನೆಯಾದಾಗಮಾತ್ರ ಜಯಂತಿಯ ಆಚರಣೆಗಳಿಗೆಅರ್ಥ ಬರಲಿದೆ ಎಂದರು.
ಸಮಾರಂಭದಲ್ಲಿಪಾಲ್ಗೊಂಡಿದ್ದ ವಕೀಲೆ ಸಹನಾಗೋಪಾಲ್ ಮಾತನಾಡಿ,ಮಹಿಳೆಯರುಸಂವಿಧಾನದತ್ತವಾಗಿ ಸಮಾನ ಹಕ್ಕು, ಅವಕಾಶಗಳನ್ನುಹೊಂದಿದ್ದಾರೆ.ಅವರುಪಡೆದುಕೊಳ್ಳುತ್ತಿರುವುದುಮೀಸಲಾತಿಯಲ್ಲ.ಸಂವಿಧಾನ ನೀಡಿದಹಕ್ಕು. ಅವಕಾಶವಂಚಿತರಾದಾಗ ಧೈರ್ಯದಿಂದ ಪ್ರಶ್ನಿಸಿಹಕ್ಕುಗಳನ್ನು ಪಡೆದುಕೊಳ್ಳಬೇಕುಎಂದರು.
ಪಿ.ವಿ.ಪಿ.ಟ್ರಸ್ಟ್ಕಾರ್ಯದರ್ಶಿ ಡಾ.ಎಂ.ಮಹದೇವ್ಮಾತನಾಡಿ, ಮಹಿಳಾಮೀಸಲಾತಿ ಮಸೂದೆ ‘ನಾರಿ ಶಕ್ತಿವಂದನ್ ಅಧಿನಿಯಮ’ ಸಮಗ್ರವಾಗಿಜಾರಿಯಾದರೂ ಸಾಮಾನ್ಯ ಮಹಿಳೆಯರಿಗೆಮೀಸಲಾತಿಯ ಲಾಭ ದೊರಕುವುದೇ ಅಥವಾಹಾಲಿ ಸದಸ್ಯರ ಮಕ್ಕಳ ಪಾಲಾಗುವುದೇ ಕಾದು ನೋಡ ಬೇಕಿದೆ ಎಂದು ಆತಂಕವ್ಯಕ್ತಪಡಿಸಿದರು.
ಟ್ರಸ್ಟಿಗಳಾದಬಿ. ಎನ್.ಉಮೇಶ್,ಎಸ್.ಶಿವಮಲ್ಲು,ಡಾ.ಪಟ್ನಾಯಕ್,ಡಾ.ಶಿವಪ್ರಕಾಶ್, ಪ್ರಿನ್ಸಿಪಾಲ್ಮಹಾಲಿಂಗ ವಿ.ಮಂಡಿಮತ್ತಿತರರು ಉಪಸ್ಥಿತರಿದ್ದರು.