ದುರ್ಬಲರಿಗಾಗಿ ಮೀಸಲಾತಿ ಅಸ್ತ್ರ Reservation

ದುರ್ಬಲರಿಗಾಗಿ ಮೀಸಲಾತಿ ಅಸ್ತ್ರ Reservation
ದುರ್ಬಲರಿಗಾಗಿ ಮೀಸಲಾತಿ ಅಸ್ತ್ರ Reservation
Published on
ಮುಳಬಾಗಿಲು: ಹೆಚ್ಚು ವಿಷಯಗಳಲ್ಲಿ ಉನ್ನತ ಪದವಿ ಪಡೆದ ಅಂಬೇಡ್ಕರ್​ ದೇಶಕ್ಕೆ ಸರ್ವ ಶ್ರೇಷ್ಠ ಸಂವಿಧಾನ ನೀಡಿದ್ದಾರೆ ಎಂದು ಆವಣಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿ.ಆದಿನಾರಾಯಣ ಹೇಳಿದರು. Reservation
ನಗರದ ಹೊರವಲಯದ ಕಾಂಗ್ರೆಸ್​ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿ, ದುರ್ಬಲ ವರ್ಗದವರಿಗೆ ಮೀಸಲಾತಿ ಕಲ್ಪಿಸಿದರು. ಸಾಮಾಜಿಕ ಸಮಾನತೆ, ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಿದರು. ಅಸ್ಪ-----ೃಶ್ಯತೆಯನ್ನು ಸಂವಿಧಾನದ 17ನೇ ವಿಧಿಯ ಮೂಲಕ ನಿಷೇಧಿಸಿದರು ಎಂದು ತಿಳಿಸಿದರು.
ಅರ್ಥಶಾಸ್ತ್ರಜ್ಞರಾಗಿ ಭಾರತೀಯ ರಿಸರ್ವ್​ ಬ್ಯಾಂಕ್​ ಸ್ಥಾಪನೆಗೆ ಮೂಲ ಪ್ರೇರಕರಾಗಿದ್ದರು. ಅವರ ಆರ್ಥಿಕ ವಿಚಾರಗಳು ದೇಶದ ಅಭಿವೃದ್ಧಿ ನೀತಿಗಳಿಗೆ ಬುನಾದಿಯಾದವು ಎಂದರು.
ಉತ್ತನೂರು ವಿಎಸ್​ಎಸ್​ಎನ್​ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್​, ಮುಖಂಡರಾದ ಎಂ.ಸಿ.ಸರ್ವಜ್ಞಗೌಡ, ಮಲ್ಲಿಕಾರ್ಜುನರೆಡ್ಡಿ, ವೆಂಕಟರೆಡ್ಡಿ, ಜಮ್ಮನಹಳ್ಳಿ ಕೃಷ್ಣಪ್ಪ, ಚೌಡಪ್ಪ, ಸಿ.ರಾಮಪ್ಪ, ಕೀಲುಹೋಳಿ ಸತೀಶ್​, ಗಣೇಶ್​ ಪಾಳ್ಯ ಕಿಟ್ಟಪ್ಪ, ಎಂ.ಎನ್​.ಅಭಿಷೇಕ್​, ವೆಂಕಟಪತಿ, ಕೆಲಸಮಂಗಲ ವೆಂಕಟರಾಮ್​, ಎಂ.ಲೋಕೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net