

ಗೌರಿಬಿದನೂರು:
ತಾಲೂಕಿನ 30 ಗ್ರಾಮ ಪಂಚಾಯಿತಿಗಳ 479 ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಜಿ.ಪ್ರಭು ಆದೇಶ ಹೊರಡಿಸಿದ್ದಾರೆ.
ಸಕಾಲಕ್ಕೆ ಚುನಾವಣೆ ನಡೆಯದ ಕಾರಣ ಗ್ರಾಮೀಣಾಭಿವೃದ್ಧಿಗೆ ಹಿನ್ನಡೆಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಇರಲಿಲ್ಲ. ಈಗ ಮೀಸಲಾತಿ ಪ್ರಕಟಗೊಂಡಿರುವುದು ತುಸು ನೆಮ್ಮದಿ ತಂದಿದೆ. ಸರ್ಕಾರ ಯಾವುದೇ ನೆಪ ಹೇಳದೆ ಶೀಘ್ರ ಚುನಾವಣೆ ನಡೆಸಬೇಕು.
— ಶಾಂತಕುಮಾರ್ ನಕ್ಕನಹಳ್ಳಿ ವಾಸಿ
ಕಾವೇರಿದ ಚರ್ಚೆ
ಗ್ರಾಮೀಣ ಅಭಿವೃದ್ಧಿ ದೃಷ್ಟಿಯಿಂದ ಗ್ರಾಪಂಗಳಿಗೆ ಸಕಾಲಕ್ಕೆ ಚುನಾವಣೆ ನಡೆಯುವುದು ಸೂಕ್ತ. ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಯುವುದಿಲ್ಲ. ಆದರೆ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಪಂಚಾಯಿತಿಗಳಲ್ಲಿ ಹಿಡಿತ ಸಾಧಿಸಲು ಶಕ್ತಿ ಮೀರಿ ಹೋರಾಟ ನಡೆಸುತ್ತವೆ.
ಶೀಘ್ರ ಚುನಾವಣೆ ನಿರೀಕ್ಷೆ
2025ರ ಡಿಸೆಂಬರ್ ಹಾಗೂ 2026ರ ಜನವರಿಯಲ್ಲೇ ಬಹುತೇಕ ಪಂಚಾಯಿತಿಗಳ ಅವಧಿ ಮುಗಿದಿದೆ. ಅವಧಿ ಮುಕ್ತಾಯಕ್ಕೆ ಮುನ್ನವೇ ಚುನಾವಣೆ ನಡೆಯಬೇಕಿತ್ತು. ಮೀಸಲು ನಿಗದಿ ವಿಳಂಬ ಹಾಗೂ ಸರ್ಕಾರ ನಾನಾ ಸಬೂಬುಗಳನ್ನು ಹೇಳುತ್ತಿದ್ದ ಕಾರಣ ಈವರೆಗೆ ಪಂಚಾಯಿತಿಗಳಿಗೆ ಚುನಾವಣೆ ನಡೆದಿರಲಿಲ್ಲ. ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಆಡಳಿತಾಧಿಕಾರಿಗಳ ಕಾರುಬಾರು ನಡೆಯುತ್ತಿತ್ತು. ಎರಡು &ಮೂರು ಪಂಚಾಯಿತಿಗಳಿಗೆ ಒಬ್ಬರೇ ಆಡಳಿತಾಧಿಕಾರಿಗಳು ಇದ್ದದ್ದರಿಂದ ಯಾವುದೇ ಕಾರ್ಯಗಳು ಸಕಾಲಕ್ಕೆ ನಡೆಯುತ್ತಿರಲಿಲ್ಲ. ಚುನಾಯಿತ ಪ್ರತಿನಿಧಿಗಳಿಲ್ಲದೆ ಜನರ ಕುಂದು&-ಕೊರತೆ ಸರಿಯಾಗಿ ಕೇಳುವವರು ಇರಲಿಲ್ಲ. ಈಗ ಮೀಸಲಾತಿ ಪ್ರಕಟವಾಗಿರುವುದರಿಂದ ಪಂಚಾಯಿತಿಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯುವ ನಿರೀಕ್ಷೆ ಹುಟ್ಟು ಹಾಕಿದೆ.