ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ಬ್ರುನೋ ರೋಜರ್ ಡಿ.24ರ ಸಂಜೆ 6 ಗಂಟೆ ಹೊತ್ತಿಗೆ ಅಷ್ಟಭುಜ ಸ್ನಾನದ ಕೊಳದ ಬಳಿಯ ಗುಡ್ಡದ ಮೇಲೆ ಹತ್ತಲು ಪ್ರಯತ್ನಿಸಿದ್ದಾನೆ. ಈ ವೇಳೆ ಜಾರಿ ಬಿದ್ದು, ಕಾಲಿಗೆ ನೋವು ಮಾಡಿಕೊಂಡಿದ್ದಾನೆ. ತೆವಳತ್ತು ಬಾಳೆ ತೋಟಯೊಂದಕ್ಕೆ ಬಂದಿದ್ದಾನೆ. ಎರಡು ದಿನದ ಬಳಿಕ ಕೃಷಿಕರು ತೋಟಕ್ಕೆ ಹೋದಾಗ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು, ರೈತರು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಅಂಬ್ಯುಲೆನ್ಸ್‌ನಲ್ಲಿ ಶುಕ್ರವಾರ ಕರೆತಂದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.