ನಾಯಿಯ ಬಾಯಲ್ಲಿದ್ದ ಸ್ವಿಪ್ಟ್ ಪಕ್ಷಿ ರಕ್ಷಣೆ

Rescue of a swift bird from a dog's mouth
Rescue of a swift bird from a dog's mouth
Published on
ಮುಳಬಾಗಿಲು: ಸಾಮಾನ್ಯವಾಗಿ ಹಿಮಾಲಯ ಪರ್ವತಗಳಲ್ಲಿ ಕಾಣಸಿಗುವ ಕಾಮನ್​ ಸ್ವಿಫ್ಟ್​ ಅಥವಾ ಪರ್ವತ ಬಾನಾಡಿ ಎಂದೇ ಕರೆಯುವ ಪಯೊಂದು ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಒದ್ದಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಜೀವ ಉಳಿಸಿದ್ದಾರೆ.
ನಗರದಲ್ಲಿ ಗಸ್ತಿನಲ್ಲಿದ್ದ ಮೀಸಲು ಪಡೆ ಪೊಲೀಸರು ನಾಯಿಯೊಂದು ಪಯನ್ನು ಬಾಯಲ್ಲಿ ಹಿಡಿದು ಓಡುತ್ತಿರುವುದನ್ನು ಕಂಡು ತಕ್ಷಣ ನಾಯಿಯಿಂದ ಬಿಡಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಇಲಾಖೆ ಸಿಬ್ಬಂದಿ ಪಯನ್ನು ತೆಗೆದುಕೊಂಡು ಆರೈಕೆಗೆ ಒಳಪಡಿಸಿದ್ದಾರೆ.
ಹಿಮಾಲಯ ಪರ್ವತಗಳಲ್ಲಿ ವಾಸಿಸುವ ಈ ಪಕ್ಷಿ ಪ್ರತಿವರ್ಷ ಸಂತಾನೋತ್ಪತಿಗಾಗಿ ದಕ್ಷಿಣ ಭಾರತಕ್ಕೆ ಬರುತ್ತವೆ. ಇದು 10 ತಿಂಗಳ ಕಾಲ ಆಕಾಶದಲ್ಲೇ ಹಾರುವ ವಿಶಿಷ್ಟ ಶಕ್ತಿ ಹೊಂದಿದೆ. ಇಂತಹ ಪಕ್ಷಿಯನ್ನು ಸಂರಕ್ಷಣೆ ಮಾಡಿರುವುದು ಒಂದು ಪಯ ಸಂತತಿಯನ್ನೇ ರಕ್ಷಣೆ ಮಾಡಿದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net