ಸಿಐಟಿಯು ತಾಲೂಕು ಅಧ್ಯೆ ಆರ್.ಆಂಜಲಮ್ಮ ಮಾತನಾಡಿ, ಈ ಹಿಂದೆ ನಾವು ಹೋರಾಟ ಮಾಡಿದ್ದ ಸಮಯದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷಿ$್ಮಹೆಬ್ಬಾಳ್ಕರ್ ನಮ್ಮ ಮನವಿ ಸ್ವೀಕರಿಸಿ, ಪ್ರಸಕ್ತ ವರ್ಷದಲ್ಲಿ ಎಲ್ಕೆಜಿ, ಯುಕೆಜಿ ದಾಖಲಾತಿ ಅಂಗನವಾಡಿ ಶಾಲೆಗಳಲ್ಲಿ ಪ್ರಾರಂಭಿಸಲು ಬಜೆಟ್ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ರಾಜ್ಯಾದ್ಯಂತ ಪಬ್ಲಿಕ್ ಶಾಲೆ ಪ್ರಾರಂಭ ಮಾಡಲು ಮುಂದಾಗಿದ್ದಾರೆ. ನಮಗೆ ನೀಡಿರುವ ಆಶ್ವಾಸನೆ ಈಡೇರಲಿಲ್ಲ ಎಂದರು.