ಸ್ಮಶಾನ ಭೂಮಿ ಮಂಜೂರಿಗೆ ಪಟ್ಟು / DEVANAHLLI

ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ರುದ್ರಭೂಮಿಗೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ತಹಸೀಲ್ದಾರ್​ ಎಂ.ಅನಿಲ್​ ಅವರಿಗೆ ವೀರಶೈವ ಜನಾಂಗ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್​.ರಮೇಶ್​ ಮತ್ತು ಮುಖಂಡರು ಮನವಿ ಸಲ್ಲಿಸಿದರು. ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್​.ರಮೇಶ್​, ಖಜಾಂಚಿ ಎಸ್​.ನಾಗೇಶ್​, ಕಾರ್ಯದರ್ಶಿ ಮಲ್ಲಿಕಾರ್ಜುನ ಇತರರು ಇದ್ದರು.
ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ರುದ್ರಭೂಮಿಗೆ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ತಹಸೀಲ್ದಾರ್​ ಎಂ.ಅನಿಲ್​ ಅವರಿಗೆ ವೀರಶೈವ ಜನಾಂಗ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್​.ರಮೇಶ್​ ಮತ್ತು ಮುಖಂಡರು ಮನವಿ ಸಲ್ಲಿಸಿದರು. ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್​.ರಮೇಶ್​, ಖಜಾಂಚಿ ಎಸ್​.ನಾಗೇಶ್​, ಕಾರ್ಯದರ್ಶಿ ಮಲ್ಲಿಕಾರ್ಜುನ ಇತರರು ಇದ್ದರು.
Published on
ದೇವನಹಳ್ಳಿ : ತಾಲೂಕಿನ ಅರದೇಶನಹಳ್ಳಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ನಾಗರಾಜ್​ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾ ಹಾಗೂ ತಾಲೂಕು ಘಟಕಗಳ ಮುಖಂಡರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್​ ಎಂ.ಅನಿಲ್​ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್​. ರಮೇಶ್​ ಮಾತನಾಡಿ, ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಮೂಲ ನಿವಾಸಿಗಳಾಗಿದ್ದು, ಅನೇಕ ಸಮುದಾಯವರು ಮೃತಪಟ್ಟರೆ ಗ್ರಾಮದ ಸ.ನಂ-. 58ರ ಸರ್ಕಾರಿ ಜಾಗವಿದ್ದು, ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಆ ಜಾಗವನ್ನು ತ್ವರಿತವಾಗಿ ಸ್ಮಶಾನಕ್ಕೆ ಮಂಜೂರು ಮಾಡಬೇಕು. ಇದರ ವಿಳಂಬದಿಂದಾಗಿ ಮಂಗಳವಾರ ಮೃತಪಟ್ಟ ನಾಗರಾಜ್​ ಅವರ ಅಂತ್ಯ ಸಂಸ್ಕಾರ ವೇಳೆ ಏಕಾಏಕಿ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಂತ್ಯಕ್ರಿಯೆ ಮಾಡದಂತೆ ತೊಂದರೆ ನೀಡಿದ್ದಾರೆ. ಅಲ್ಲದೇ, ಅಂತ್ಯಸಂಸ್ಕಾರಕ್ಕೆ ಅನುವುಮಾಡಿಕೊಡುವಂತೆ ಕೇಳಿಕೊಂಡರೂ ಅನುಮತಿ ನೀಡಿಲ್ಲ. ಜಾಗವನ್ನು ಸಮುದಾಯದ ಸ್ಮಶಾನಕ್ಕೆ ಮೀಸಲಿಡಬೇಕು. ಜಾಗ ಮಂಜೂರು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ತಹಸೀಲ್ದಾರ್​ ಎಂ.ಅನಿಲ್​ ಮಾತನಾಡಿ, ನಮ್ಮ ದಾಖಲೆಗಳ ಪ್ರಕಾರ ಅದು ಕುಂಟೆ ಜಾಗ ಎಂದೆ ಇದೆ. ಕೆರೆ&ಕುಂಟೆ ಮುಚ್ಚಿ ಇತರೆ ಉದ್ದೇಶಕ್ಕೆ ಭೂಮಿ ನೀಡುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಕುಂಟೆ ಮುಚ್ಚದೇ ಅದರ ಪಕ್ಕದ ಸರ್ಕಾರಿ ಜಾಗದಲ್ಲಿ ಸ್ಮಶಾನ ಮಾಡಿಕೊಂಡಿದ್ದರೆ ಅದನ್ನು ಒಮ್ಮೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ನಿಮಗೆ ಸ್ಮಶಾನಕ್ಕೆ ಭೂಮಿ ನೀಡಲು ಅವಕಾಶವಿದ್ದರೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಶಾಂತಮೂರ್ತಿ, ಜಿಲ್ಲಾ ಮಾಜಿ ಅಧ್ಯಕ್ಷ ವಿರುಪಾಕ್ಷ ಶಾಸ್ತ್ರಿ, ಪದಾಧಿಕಾರಿಗಳಾದ ಅರದೇಶನಹಳ್ಳಿ ಎ.ಪಿ. ನಾಗೇಶ್​, ಎಸ್​.ಮಹೇಶ್​, ಆನಂದ, ಚನ್ನಪ್ಪ, ಮುನಿರಾಜು, ರವಿಕುಮಾರ್​, ನಾಗರಾಜ್​, ಬಸವರಾಜು, ಮನೋಜಕುಮಾರ್​, ರುದ್ರಮುನಿಯಪ್ಪ, ಬಸವರಾಜ್​, ಚಿಕ್ಕಸಿದ್ದಪ್ಪ, ಲಾಯರ್​ ಕೆಂಪರಾಜ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net