ಅಭಿವೃದ್ಧಿ ಕಾರ್ಯದಿಂದ ಜನರ ಋಣ ತೀರಿಸುವೆ

ಕುಣಿಗಲ್​ ತಾಲೂಕು ಅಮೃತ್ತೂರು ಹೋಬಳಿ ಹಂದಲಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಶಾಸಕ ಡಾ.ರಂಗನಾಥ್​ ಹಾಗೂ ಸ್ಥಳಿಯ ಗ್ರಾಮ ಪತಿನಿಧಿಗಳು ಇದ್ದರು.
ಕುಣಿಗಲ್​ ತಾಲೂಕು ಅಮೃತ್ತೂರು ಹೋಬಳಿ ಹಂದಲಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಶಾಸಕ ಡಾ.ರಂಗನಾಥ್​ ಹಾಗೂ ಸ್ಥಳಿಯ ಗ್ರಾಮ ಪತಿನಿಧಿಗಳು ಇದ್ದರು.
Published on
ಕುಣಿಗಲ್​:ಮತ ಹಾಕಿ ಆಯ್ಕೆ ಮಾಡಿದ ಮತದಾರರ ಋಣವನ್ನು ಜನರಿಗೆ ಮೂಲಸೌಲಭ್ಯ ದೊರಕಿಸಿ ಕೊಡುವ ಮೂಲಕ ತೀರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಾ.ಎಚ್​.ಡಿ.ರಂಗನಾಥ್​ ತಿಳಿಸಿದರು.
ತಾಲೂಕಿನ ಅಮೃತ್ತೂರು ಹೋಬಳಿ ಹಂದಲಗೆರೆದಲ್ಲಿ ಗುರುವಾರ ಕುಣಿಗಲ್​ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಈ ನಾಡಿನ ಪ್ರಭುಗಳು ಅವರ ಕೋರಿಕೆಗಳನ್ನು ಹೀಡೆರಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅದ್ಯತೆ ನೀಡಿದ್ದು, ನೀರಾವರಿ, ವಿದ್ಯುತ್​, ರಸ್ತೆ, ಚರಂಡಿ, ಸರ್ಕಾರಿ ಕಚೇರಿಗಳ ಕಟ್ಟಡ ಸೇರಿ ವಿವಿಧ ಅಭಿವದ್ದಿಗೆ ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಕಾಮಗಾರಿ ಕೆಗೆತ್ತಿಕೊಳ್ಳಲಾಗಿದೆ. ಈಗಗಲೇ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ಲಿಂಕ್​ ಕೆನಾಲ್​ ಕಾಮಗಾರಿ ಕೆಗೆತ್ತಿಕೊಂಡಿದ್ದು, ಈ ಕಾಮಗಾರಿ ಪ್ರಗತಿಯಲ್ಲಿದೆ. ಜತೆಗೆ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಶ್ರೀರಂಗ ಏತಾ ನೀರಾವರಿ ಯೋಜನೆ ಕಾಮಗಾರಿ ಪ್ರಾರಂಭವಾಗಿದ್ದು, ಈಗಾಗಲೇ ಹುತ್ರಿದುರ್ಗ ಹೋಬಳಿಯ 8 ಕೆರೆಗಳಿಗೆ ನೀರು ಹರಿಸಲಾಗಿದೆ ಎಂದರು.
34 ಕೋಟಿ ವೆಚ್ಚದಲ್ಲಿ ಕೊತ್ತಗೆರೆ ಏತಾ ನೀರಾವರಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಟೆಂಡರ್​ ಪ್ರಕ್ರಿಯೆ ಹಂತದಲ್ಲಿದೆ. 90 ಕೋಟಿ ರೂ.ವೆಚ್ಚದಲ್ಲಿ ವೆಜಿ ಗುಡ್ಡದಿಂದ ಹುಲಿಯೂರುದುರ್ಗ ಹೋಬಳಿಯ ಎರಡು ಕೆರೆಗಳನ್ನು ತುಂಬಿಸುವ ಯೋಜನೆ ಸಿದ್ಧವಾಗಿದೆ ಎಂದರು.
ರಂಗೋಲಿ ಈ ನಾಡಿನ ಗ್ರಾಮೀಣ ಭಾಗದ ಕಲೆ ಮತ್ತು ಸಂಸತಿಯಾಗಿದೆ. ತಾಯಂದಿರು ಅನಾದಿಕಾಲದಿಂದಲೂ ಮನೆಯ ಮುಂದೆ, ದೇವಾಲಯ, ಅಶ್ವತ್ಥ ಕಟ್ಟೆ ಬಳಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರವನ್ನು ಬಿಡಿಸುತ್ತಿದ್ದರು. ಆಧುನಿಕ ಯುಗದಲ್ಲಿ ಈ ಕಲೆ ಕಣ್ಣಮರೆಯಾಗುತ್ತಿದೆ. ಈ ಕಲೆಯನ್ನು ಉಳಿಸಲು ರಂಗೋಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net