ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ! Dr Anand Pandurangi

ಡಾ.ಆನಂದ ಅವರು ಮನೋವಿಜ್ಞಾನ ಲೇಖಕರೂ ಆಗಿದ್ದರು. ಅವರೊಬ್ಬ ಉತ್ತಮ ಭಾಷಣಕಾರರೂ ಆಗಿದ್ದರು. ಕನ್ನಡದ ನಂಬರ್​ 1 ದಿನಪತ್ರಿಕೆ ವಿಜಯವಾಣಿಯ ಅಂಕಣಕಾರರು ಆಗಿದ್ದರು.
Dr Anand Pandurangi
ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ
Published on

ಧಾರವಾಡ: ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ( Dr Anand Pandurangi ) ಅವರು ಗುರುವಾರ (ಸೆ.24) ಬೆಳಗ್ಗೆ ನಿಧನ ಹೊಂದಿದರು. ಆನಂದ ಅವರಿಗೆ 72 ವರ್ಷ ವಯಸ್ಸಾಗಿತ್ತು.

ಸೆ. 22ರಂದು ಸಂಜೆ 7 ಗಂಟೆ ಸುಮಾರಿಗೆ ಹೃದಯಾಘಾಕ್ಕೊಳಗಾಗಿದ್ದ ಡಾ. ಆನಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಆನಂದ​ ಅವರು ಪತ್ನಿ ಅನುಪಮಾ, ಪುತ್ರ ಡಾ. ಆದಿತ್ಯ ಪಾಂಡುರಂಗಿ, ಸೊಸೆ ಡಾ. ಸ್ವಪ್ನಾ ಅವರನ್ನು ಅಗಲಿದ್ದಾರೆ.

ಡಾ.ಆನಂದ ಅವರು ಮನೋವಿಜ್ಞಾನ ಲೇಖಕರೂ ಆಗಿದ್ದರು. ಅವರೊಬ್ಬ ಉತ್ತಮ ಭಾಷಣಕಾರರೂ ಆಗಿದ್ದರು. ಕನ್ನಡದ ನಂಬರ್​ 1 ದಿನಪತ್ರಿಕೆ ವಿಜಯವಾಣಿಯ ಅಂಕಣಕಾರರು ಆಗಿದ್ದರು.

ಮನೋವ್ಯದ್ಯಕೀಯ ಚಿಕಿತ್ಸಕರಾಗಿದ್ದ ಅವರ ಬಳಿ ರಾಜ್ಯದ ಹಲವು ಜಿಲ್ಲೆಗಳ ಜನ ಚಿಕಿತ್ಸೆಗೆ ಬರುತ್ತಿದ್ದರು. ಸಪ್ತಾಪುರದ ಮಿಚುಗನ್ ಕಾಂಪೌಂಡ್‌ನ ಶಾಂತಿ ಧಾಮದಲ್ಲಿ ನಿತ್ಯ ನೂರಾರು ಜನರಿಗೆ ಮನೋವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದರು.

ಆನಂದ ಅವರು ಕೇವಲ ಆಸ್ಪತ್ರೆಗೆ ಸೀಮಿತವಾಗದೆ, ಜನಮಾನಸದ ವೈದ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದರು. ನಾಡಿನ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು, ಸಾವಿರಾರು ಮನೋರೋಗಿಗಳಿಗೆ ಜೀವದಾನ ನೀಡುವುದರ ಜೊತೆಗೆ ಅವರ ಬಾಳಿನಲ್ಲಿ ಹೊಸ ಬೆಳಕು ಮೂಡಿಸಿದ್ದರು. ವೈದ್ಯಕೀಯ ವೃತ್ತಿಯನ್ನು ಕೇವಲ ಸೇವೆಯಾಗಿ ಸ್ವೀಕರಿಸಿದ್ದ ಅವರ ಮಾನವೀಯ ಗುಣಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು.

Also Read
ಸಿಇಸಿ ನಿರ್ಧಾರಗಳು ಅಕ್ರಮವಾಗಿದ್ದರೆ ರಾಷ್ಟ್ರಪತಿಯನ್ನೇಕೆ ಭೇಟಿಯಾಗಲಿಲ್ಲ...? ಚುನಾವಣಾ ಆಯುಕ್ತರ ನಡೆ ಪ್ರಶ್ನಿಸಿದ ರಾಜಕೀಯ ವಿಶ್ಲೇಷಕರು! |Election Commission
Dr Anand Pandurangi

ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೌಲಭ್ಯ ತಲುಪಿಸಲು ಅವರು ಹಳ್ಳಿ ಹಳ್ಳಿಗಳಲ್ಲಿ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದರು. ಅಷ್ಟೇ ಅಲ್ಲದೆ, ಶಾಲಾ-ಕಾಲೇಜುಗಳಿಗೆ ಖುದ್ದು ಭೇಟಿ ನೀಡಿ ಇಂದಿನ ಯುವಜನರಲ್ಲಿ ಮಾನಸಿಕ ಸ್ಥಿರತೆ ಮತ್ತು ಧೈರ್ಯದ ಮಹತ್ವವನ್ನು ತಿಳಿಸಿಕೊಡುತ್ತಿದ್ದರು. ಇವರ ಈ ಅಸಾಧಾರಣ ಸಮಾಜಮುಖಿ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ಹಾಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ 'ಡಾ. ಬಿ.ಸಿ. ರಾಯ್ ಪ್ರಶಸ್ತಿ' ನೀಡಿ ಗೌರವಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net