ಕೀಲುಕೋಟೆ ಆಂಜನೇಯಸ್ವಾಮಿ ದೇಗುಲಕ್ಕೆ ಕಾಯಕಲ್ಪ

Renovation to Keelukote Anjaneyaswamy Temple
Renovation to Keelukote Anjaneyaswamy Temple
Published on
ಕೋಲಾರ: ನೂರಾರು ವರ್ಷ ಇತಿಹಾಸದ ನಗರದ ಶಿಥಿಲಾವಸ್ಥೆಯಲ್ಲಿರುವ ಕೀಲುಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವನ್ನು ಸಂಪೂರ್ಣ ಕಲ್ಲಿನಲ್ಲೇ ಮರು ನಿಮಾರ್ಣ ಮಾಡುವುದು ಜೀವನದ ಬಹುದೊಡ್ಡ ಸಂಕಲ್ಪ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.
ತಹಸೀಲ್ದಾರ್​ ಕಚೇರಿಯಲ್ಲಿ ಸೋಮವಾರ ಕೀಲುಕೋಟೆ ಆಂಜನೇಯಸ್ವಾಮಿ ದೇವಾಲಯ ಜೀಣೋರ್ದ್ಧಾರ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇವಾಲಯ ಜೀಣೋರ್ದ್ಧಾರವಲ್ಲದೇ, ಪುಣ್ಯಕಾರ್ಯಕ್ಕೆ ವಿಘ್ನ ತರಲು ಪ್ರಯತ್ನಿಸುವವರು ನಮ್ಮಿಂದ ತೊಂದರೆಗೆ ಸಿಲುಕದಿರುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು. ದೇವಾಲಯದ ಜೀಣೋರ್ದ್ಧಾರ ಕಾರ್ಯಕ್ಕೆ ನೀಲಿನಕ್ಷೆ ಸಿದ್ಧವಾಗಿದ್ದು, ಒಂದೂವರೆ ವರ್ಷದೊಳಗೆ ಕೆಲಸ ಮುಗಿಸಲು ದಿನಾಂಕ ನಿಗದಿಯಾಗಿದೆ. ಜೂ.24ರಂದು ಬೆಳಗ್ಗೆ 8.-30ಕ್ಕೆ ಶಿಥಿಲಗೊಂಡ ದೇವಸ್ಥಾನದ ಕಟ್ಟಡ ತೆರವುಗೊಳಿಸುವ ಮುನ್ನ ಶಾಸೊಕ್ತವಾಗಿ ಪೂಜೆ ಸಲ್ಲಿಸಿ, ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗುತ್ತದೆ ಎಂದರು.
ದೇಗುಲ ನಿರ್ಮಿಸಲು ಜು.5ರಂದು ಭೂಮಿಪೂಜೆ ನೆರವೇರಿಸಲು ತೀಮಾರ್ನ ಕೈಗೊಳ್ಳಲಾಗಿದೆ. ಮುಂದಿನ 18 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಿ, ಭಕ್ತರ ದರ್ಶನಕ್ಕೆ ಮಂದಿರ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ದೇವಸ್ಥಾನದ ಜೀಣೋರ್ದ್ಧಾರಕ್ಕೆ ನೂರು ಮಂದಿ ಅಡ್ಡಗಾಲು ಹಾಕಿದರೂ ಕಣ್ಮುಚ್ಚಿ ಕೂರಲ್ಲ. ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಿಯೇ ತೀರುತ್ತೇವೆ. ಧನಸಹಾಯ ಮಾಡುವ ಗುಣವಿರುವವರು ಕೈಜೋಡಿಸಿ. ಅದನ್ನು ಬಿಟ್ಟು ದೇವಸ್ಥಾನದ ಕೆಲಸಕ್ಕೆ ತೊಂದರೆ ಕೊಡಲು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಗುಡುಗಿದರು.
ದೇವಸ್ಥಾನದ ನಿಮಾರ್ಣ ಕಾರ್ಯಕ್ಕಾಗಿ ಶಾಸಕರನ್ನೊಳಗೊಂಡ ತಂಡದಿಂದ 50 ಲಕ್ಷ ರೂ. ವೈಯಕ್ತಿಕ ದೇಣಿಗೆ ಘೋಷಿಸಿದ್ದಾರೆ. ತಾವೇ ಮುಜರಾಯಿ ಇಲಾಖೆಯ ಸಮಿತಿ ಅಧ್ಯಕ್ಷರಾಗಿರುವುದರಿಂದ, ಇಡೀ ಆರ್ಥಿಕ ವ್ಯವಹಾರದ ಉಸ್ತುವಾರಿ ಖುದ್ದಾಗಿ ನೋಡಿಕೊಳ್ಳುವುದಾಗಿ ಸ್ಪಷ್ಟಪಡಿಸಿದರು.
ದಾನಿಗಳು ನೀಡುವ ಪ್ರತಿ ರೂಪಾಯಿ ದುರುಪಯೋಗವಾಗದಂತೆ ತಡೆಯಲು ದೇವಸ್ಥಾನ ಜೀಣೋರ್ದ್ಧಾರ ಸಮಿತಿ ರಚಿಸಲಾಗಿದೆ. ಸಾರ್ವಜನಿಕರು, ದಾನಿಗಳು ನೀಡುವ ಹಣ ನೇರ ಸಮಿತಿಯ ಬ್ಯಾಂಕ್​ ಖಾತೆಗೆ ಜಮೆ ಮಾಡಿಕೊಂಡು ಹಂತ ಹಂತವಾಗಿ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದರು.
ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​, ತಹಸೀಲ್ದಾರ್​ ಶ್ರೀನಿವಾಸ್​, ತಾಪಂ ಇಒ ಮಂಜುನಾಥ್​, ಮುಜರಾಯಿ ತಹಸೀಲ್ದಾರ್​ ಮೋಹನ್​, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್​, ಸಿಂಡಿಕೇಟ್​ ಸದಸ್ಯ ಸೀಸಂದ್ರ ಗೋಪಾಲಗೌಡ, ಆರ್​.ಐ.ರಾಜೇಂದ್ರ ಪ್ರಸಾದ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net