20 ಲಕ್ಷ ರೂ. ವೆಚ್ಚದಲ್ಲಿ ಆಂಜನೇಯಸ್ವಾಮಿ ದೇಗುಲ ನವೀಕರಣ

ಪಟ್ಟಣದ ವಾರ್ಡ್ ನಂ.22 ರಲ್ಲಿರುವ ಪುರಾತನ ಕೊಳದ ಅಂಜನೇಯ ಸ್ಥಾಮಿ ದೇವಸ್ಥಾನ ಮತ್ತು ಕಲ್ಯಾಣಿಯ ನವೀಕರಣ ಹಾಗೂ ಆವರಣದಲ್ಲಿ ಅಳವಡಿಸಲಾಗಿರುವ ಹೈಮಾಸ್ ಲ್ಯಾಂಪ್ ನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಅನಿಲ್‌ಕುಮಾರ್, ಗಣೇಶ್, ರಘುಶಾಮಿ, ಬಿ.ಎನ್.ಪ್ರಕಾಶ್ ಇದ್ದರು
ಪಟ್ಟಣದ ವಾರ್ಡ್ ನಂ.22 ರಲ್ಲಿರುವ ಪುರಾತನ ಕೊಳದ ಅಂಜನೇಯ ಸ್ಥಾಮಿ ದೇವಸ್ಥಾನ ಮತ್ತು ಕಲ್ಯಾಣಿಯ ನವೀಕರಣ ಹಾಗೂ ಆವರಣದಲ್ಲಿ ಅಳವಡಿಸಲಾಗಿರುವ ಹೈಮಾಸ್ ಲ್ಯಾಂಪ್ ನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಅನಿಲ್‌ಕುಮಾರ್, ಗಣೇಶ್, ರಘುಶಾಮಿ, ಬಿ.ಎನ್.ಪ್ರಕಾಶ್ ಇದ್ದರು
Published on
ಚನ್ನರಾಯಪಟ್ಟಣ: ಕೊಳದ ಅಂಜನೇಯ ಸ್ವಾಮಿಯ ಭಕ್ತರ ಆಶಯದಂತೆ ದೇವಸ್ಥಾನ ಮತ್ತು ದೇವಸ್ಥಾನದ ಆವರಣವನ್ನು 20 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ವಾರ್ಡ್ ನಂ.22 ರಲ್ಲಿರುವ ಪುರಾತನ ಕೊಳದ ಅಂಜನೇಯ ಸ್ಥಾಮಿ ದೇವಸ್ಥಾನ ಮತ್ತು ಕಲ್ಯಾಣಿಯ ನವೀಕರಣ ಹಾಗೂ ಆವರಣದಲ್ಲಿ ಅಳವಡಿಸಲಾಗಿರುವ ಹೈಮಾಸ್ ಲ್ಯಾಂಪ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕೊಳದ ಅಂಜನೇಯ ಸ್ವಾಮಿ ಸಮಿತಿಯವರು ಪ್ರತಿವರ್ಷ ಸ್ವಾಮಿಯವರ ಪೂಜಾ ಕೈಕಂರ್ಯ ನಡೆಸಿ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸುತ್ತಿದ್ದಾರೆ. ಇದರೊಂದಿಗೆ ಗಂಗಾರತಿ ಕಾರ್ಯಕ್ರಮ ನಡೆಸಿದ ವೇಳೆ ಭಕ್ತರಿಗೆ ನೀಡಿದ್ದ ಅಶ್ವಾಸನೆಯಂತೆ ದೇವಸ್ಥಾನ ಮತ್ತು ಆವರಣವನ್ನು ನವೀಕರಣಗೊಳಿಸಲಾಗಿದೆ. ಜನರು ಕೂರಲು ಕೊಳದ ಸುತ್ತ ಕಾಂಕ್ರಿಟೀಕರಣ, ದೇವಸ್ಥಾನದ ಸುತ್ತ ಕಾಂಕ್ರಿಟೀಕರಣ ಸೇರಿ ಜನ ಸಲ್ಲಿಸಿದ್ದ ಕೋರಿಕೆಯನ್ನು ಪೂರ್ಣಗೊಳಿಸಲಾಗಿದೆ ಎಂದ ಅವರು, ಆಂಜನೇಯ ಸ್ವಾಮಿಯ ಕೃಪೆಯಿಂದ ಹಿಂಗಾರಿನಲ್ಲಿ ಮಳೆ ಬಿದ್ದು ತಾಲೂಕು ಸುಭಿಕ್ಷೆಗೊಂಡ ರೈತರ ಮೊಗದಲ್ಲಿ ಸಂತಸ ಮೂಡುವಂತಾಗಲಿ ಎಂದರು.

ಈ ವೇಳೆ ಹಾಜರಿದ್ದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಆರ್ಚಕ ವಿಶ್ವನಾಥ್ ದೀಕ್ಷಿತ್ ಮಾತನಾಡಿದರು. ಟಿಎಪಿಸಿಎಂಎಸ್ ನಿರ್ದೇಶಕ ಅನಿಲ್‌ಕುಮಾರ್, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ್, ಮಾಜಿ ಸದಸ್ಯ ರಘುಶಾಮಿ, ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದ ಆರ್ಚಕರಾದ ಮಧುಸ್ವಾಮಿ, ಗುತ್ತೀಗೆದಾರ ಬಿ.ಎನ್.ಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net