ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆಗೆ ಬಲ-Renewable energy

 ನವೀಕರಿಸಬಹುದಾದ ಇಂಧನ ಯೋಜನೆಗಳು
ನವೀಕರಿಸಬಹುದಾದ ಇಂಧನ ಯೋಜನೆಗಳು
Published on
ಬೆಂಗಳೂರು: ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆಗೆ ಬಲ ಬಂದಿದೆ. ಸವೀಕರಿಸಬಹುದಾದ ಇಂಧನ ಪ್ರಸರಣಾ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ಪ್ರದೇಶಗಳಲ್ಲಿ, ಹಳ್ಳಿಗಳು ಕೇವಲ ವಿದ್ಯುತ್ ಮಾರ್ಗಗಳು ಮತ್ತು ಟವರ್​​ಗಳ ವ್ಯಾಪ್ತಿಯನ್ನು ಮೀರಿ ಬೆಳೆಯುವ ಹೊಸ ಅವಕಾಶಗಳ ಉದಯಕ್ಕೆ ಸಾಕ್ಷಿಯಾಗುತ್ತಿವೆ. ಕೇವಲ ಒಂದು ಇಂಧನ ಯೋಜನೆಯಾಗಿ ಆರಂಭವಾಗುವ ಪ್ರಕ್ರಿಯೆ, ಹೆಚ್ಚಾಗಿ ಸಮಗ್ರ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಪ್ರೇರಕಶಕ್ತಿಯಾಗಿ ಮಾರ್ಪಾಡಾಗುತ್ತಿದೆ.
ಭಾರತದಲ್ಲಿ ನವೀಕರಿಸಬಹುದಾದ ಇಂಧನ ವಲಯದ ತ್ವರಿತ ವಿಸ್ತರಣೆಯಿಂದಾಗಿ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳನ್ನು ರಾಷ್ಟ್ರೀಯ ಗ್ರಿಡ್​​​​ಗೆ ಜೋಡಿಸುವ ಬೃಹತ್ ಪ್ರಸರಣಾ ಜಾಲಗಳ ಅಗತ್ಯ ಸೃಷ್ಟಿಯಾಗಿದೆ. ‘ರೆಸೋನಿಯಾ ದಂತಹ ಕಂಪನಿಗಳು ಹೆಚ್ಚಾಗಿ ಕೃಷಿ ಭೂಮಿಯನ್ನೇ ಹೊಂದಿರುವ ಹಲವು ಪ್ರದೇಶಗಳಲ್ಲಿ ಇಂತಹ ಜಾಲಗಳನ್ನು ಅಭಿವೃದ್ಧಿಪಡಿಸುತ್ತಿವೆ.ಈ ಯೋಜನೆಗಳ ಪ್ರಮುಖ ಉದ್ದೇಶ ಶುದ್ಧ ವಿದ್ಯುತ್ ಅನ್ನು ಸಾಗಿಸುವುದಾಗಿದ್ದರೂ ಅವುಗಳ ಅನುಷ್ಠಾನವು ಹಳ್ಳಿಗಳ ಆರ್ಥಿಕತೆಯ ಮೇಲೆ ಪರೋಕ್ಷ ಲಾಭ ತಂದುಕೊಡುತ್ತವೆ.
ನಿರ್ಮಾಣ ಹಂತದಲ್ಲಿಯೇ ಇದರ ಮೊದಲ ಪ್ರಭಾವವನ್ನು ಕಾಣಬಹುದು. ವಿದ್ಯುತ್ ಪ್ರಸರಣಾ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಾಮಗ್ರಿಗಳ ಸಾಗಾಟ, ನಿವೇಶನ ಸಿದ್ಧತೆ, ಯಂತ್ರೋಪಕರಣಗಳ ನಿರ್ವಹಣೆ ಮತ್ತು ಸಾಗಾಟ ವ್ಯವಸ್ಥೆಯ ಬೆಂಬಲದಂತಹ ವಿವಿಧ ಸೇವೆಗಳ ಅಗತ್ಯವಿರುತ್ತದೆ. ಈ ಕಾರ್ಯಗಳಲ್ಲಿ ಹೆಚ್ಚಿನವು ಸ್ಥಳೀಯ ಕಾರ್ಮಿಕರು ಮತ್ತು ಪೂರೈಕೆದಾರರನ್ನೇ ಅವಲಂಬಿಸಿರುತ್ತವೆ.
ಗ್ರಾಮೀಣ ಕಾರ್ಮಿಕರಿಗೆ, ಈ ನಿರ್ಮಾಣ ಕಾಮಗಾರಿಗಳು ತಾತ್ಕಾಲಿಕವಾದರೂ ಅತ್ಯಂತ ಉಪಯುಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತವೆ. ಸ್ಥಳೀಯ ಟ್ರ್ಯಾಕ್ಟರ್ ಮಾಲೀಕರು, ಸಾರಿಗೆ ನಿರ್ವಾಹಕರು ಮತ್ತು ಕೂಲಿ ಕಾರ್ಮಿಕರು ಯೋಜನೆಗೆ ಪೂರಕವಾದ ಕೆಲಸಗಳನ್ನು ಕಂಡುಕೊಳ್ಳುತ್ತಾರೆ.
ಇದರಲ್ಲಿರುವ ಮತ್ತೊಂದು ಪ್ರಮುಖ ಆರ್ಥಿಕ ಆಯಾಮವೆಂದರೆ, ಪ್ರಸರಣಾ ಮೂಲಸೌಕರ್ಯಗಳಿಗೆ ಜಾಗ ನೀಡುವ ರೈತರದ್ದು. ಹಲವು ನವೀಕರಿಸಬಹುದಾದ ಯೋಜನೆಗಳಲ್ಲಿ, ಅಭಿವೃದ್ಧಿಗಾರರು ಜಮೀನನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು ಗುತ್ತಿಗೆ (ಲೀಸ್) ಮಾದರಿಯನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ರೈತರು ಭೂಮಿಯ ಮಾಲೀಕತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ, ತಮ್ಮ ಜಮೀನಿನಲ್ಲಿ ಟವರ್ಗಳಂತಹ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅವಕಾಶ ನೀಡಿದ್ದಕ್ಕಾಗಿ ಸೂಕ್ತ ಪರಿಹಾರವನ್ನೂ ಪಡೆಯುತ್ತಾರೆ.
ಈ ರೀತಿಯ 'ದ್ವಿಮುಖ ಆದಾಯ'ದ ವ್ಯವಸ್ಥೆಯು ಅನೇಕ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೇವಲ ಕೃಷಿ ಆದಾಯವು ಹವಾಮಾನ ವೈಪರೀತ್ಯ ಮತ್ತು ಮಾರುಕಟ್ಟೆ ಬೆಲೆಗಳಿಂದಾಗಿ ಏರಿಳಿತಗಳನ್ನು ಕಾಣಬಹುದು. ಆದರೆ ಗುತ್ತಿಗೆಯಿಂದ ಬರುವ ನಿಶ್ಚಿತ ಆದಾಯವು, ಮನೆ ಖರ್ಚು, ಮಕ್ಕಳ ಶಿಕ್ಷಣ ಅಥವಾ ಕೃಷಿಯಲ್ಲಿ ಮರುಹೂಡಿಕೆಗೆ ಪೂರಕ ನೆರವಾಗುತ್ತದೆ. ಕೆಲವು ರೈತರು ಈ ಹೆಚ್ಚುವರಿ ಆದಾಯವನ್ನು ನೀರಾವರಿ ವ್ಯವಸ್ಥೆಗಳ ಉನ್ನತೀಕರಣಕ್ಕೆ ಅಥವಾ ಸುಧಾರಿತ ಬೀಜಗಳ ಖರೀದಿಗೆ ಬಳಸಿದ್ದಾರೆ. ಇನ್ನು ಕೆಲವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಥವಾ ಕೃಷಿ-ಪೂರಕ ಚಟುವಟಿಕೆಗಳತ್ತ ಮುಖಮಾಡಿ ಆದಾಯದ ಮೂಲಗಳನ್ನು ವಿಸ್ತರಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net