ಕ್ರಷರ್ ಸಾಮಗ್ರಿ ರವಾನೆಗೆ ನಿರ್ಬಂಧ ತೆರವುಗೊಳಿಸಿ

Remove restrictions on shipment of crusher materials
Remove restrictions on shipment of crusher materials
Published on

ಜಲ್ಲಿ, ಕಲ್ಲು ಹಾಗೂ ಇತರ ಕ್ರಷರ್​ ಉತ್ಪನ್ನಗಳನ್ನು ಕರ್ನಾಟಕಕ್ಕೆ ಪೂರೈಸುವುದನ್ನು ತಮಿಳುನಾಡು ಸರ್ಕಾರ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಅತ್ತಿಬಲೆಯಲ್ಲಿ ಲಾರಿ ಮಾಲೀಕರು ಪ್ರತಿಭಟನೆ ನಡೆಸಿದರು.

ಕ್ರಷರ್​ ಉತ್ಪನ್ನಗಳನ್ನು ಕರ್ನಾಟಕಕ್ಕೆ ಪೂರೈಸುವುದನ್ನು ಸ್ಥಗಿತಗೊಳಿಸಿರುವುದರಿಂದ ಬೆಂಗಳೂರು ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ನಿರ್ಮಾಣ ಕಾಮಗಾರಿಗಳ ಮೇಲೆ ಇದರ ಪರಿಣಾಮಬೀರುತ್ತಿದ್ದು, ಟಿಪ್ಪರ್​ ಹಾಗೂ ಲಾರಿ ಮಾಲೀಕರೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ತಮಿಳುನಾಡು ಸರ್ಕಾರ ಕೂಡಲೇ ಕರ್ನಾಟಕಕ್ಕೆ ಜಲ್ಲಿ, ಕಲ್ಲು ಹಾಗೂ ಇತರ ಕಲ್ಲಿನ ಉತ್ಪನ್ನಗಳ ಪೂರೈಕೆಗೆ ಅವಕಾಶ ನೀಡಬೇಕು ಎಂದು ಟಿಪ್ಪರ್​, ಲಾರಿ ಮಾಲೀಕರ ಸಂ ಹಾಗೂ ಆರ್​.ಎಂ.ಸಿ. ಲಾರಿ ಮಾಲೀಕರ ಸಂ ಮತ್ತು ಹಾಲೋ ಬ್ಲಾಕ್​ ಲಾರಿ ಮಾಲೀಕರ ಸಂಗಳ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
ಟಿಪ್ಪರ್​ ಲಾರಿ ಮಾಲೀಕರ ಸಂದ ಆರ್​.ಗೋಪಾಲ್​ ರೆಡ್ಡಿ ಮಾತನಾಡಿ, ಟಿಪ್ಪರ್​ ಹಾಗೂ ಲಾರಿ ಮಾಲೀಕರು ಕಾನೂನಿನಡಿ ತಮಿಳುನಾಡು ಸರ್ಕಾರಕ್ಕೆ ರಾಯಲ್ಟಿ, ಜಿಎಸ್ಪಿ ಪಾವತಿಸಿ, ಅಲ್ಲಿಂದ ಕಾನೂನು ಬದ್ಧವಾಗಿ ಜಲ್ಲಿ, ಕಲ್ಲು ಹಾಗೂ ಇತರ ಕಲ್ಲಿನ ಸಾಮಗ್ರಿ ತೆಗೆದುಕೊಂಡು ಬರುತ್ತಿದ್ದರು. ಆದರೂ ಏಕಾಏಕಿ ತಮಿಳುನಾಡು ಸರ್ಕಾರ ಜಲ್ಲಿ, ಕಲ್ಲು ಹಾಗೂ ಇತರ ಕಲ್ಲಿನ ಉತ್ಪನ್ನಗಳ ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರೆ ನಾವು ಎಲ್ಲಿಗೆ ಹೋಗಬೇಕು? ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ತಮಿಳುನಾಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net