ಅನಧಿಕೃತ ಮಳಿಗೆ ತೆರವು unauthorized shops

ಅನಧಿಕೃತ ಮಳಿಗೆ ತೆರವು unauthorized shops
ಅನಧಿಕೃತ ಮಳಿಗೆ ತೆರವು unauthorized shops
Published on
ಮುಳಬಾಗಿಲು: ತಾಲೂಕಿನ ತಾಯಲೂರು ಗ್ರಾಮದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ 6 ಅಂಗಡಿ ಮಳಿಗೆಗಳನ್ನು ಪಿಡಿಒ ಶ್ರೀನಿವಾಸ ರೆಡ್ಡಿ ನೇತೃತ್ವದಲ್ಲಿ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.unauthorized shops
ತಾಯಲೂರು ಗ್ರಾಪಂ ಹಾಗೂ ಹೋಬಳಿ ಮುಖ್ಯ ಕೇಂದ್ರವಾಗಿದ್ದು, ಆಂಧ್ರಪ್ರದೇಶದ ವಿ.ಕೋಟ&ಮುಳಬಾಗಿಲು ಮುಖ್ಯರಸ್ತೆಯಲ್ಲಿದೆ. ಈ ರಸ್ತೆಯಲ್ಲಿ ಕೆಲ ಅಂಗಡಿಗಳು ಅನಧಿಕೃತವಾಗಿ ರಸ್ತೆಗೆ ಬಂದ ಹಿನ್ನೆಲೆ ತಾಪಂ ಇಒ ಎನ್​.ವಿ.ಬಾಬು ಅನುಮತಿ ಮೇರೆಗೆ ಒತ್ತುವರಿ ತೆರವುಗೊಳಿಸಲಾಯಿತು.
ಪಿಡಿಒ ಶ್ರೀನಿವಾಸ್​ ರೆಡ್ಡಿ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಒಳಪಡುವ ಆಸ್ತಿ ಕಾಪಾಡುವುದು ನಮ್ಮ ಜವಾಬ್ದಾರಿ. ಯಾವುದೇ ರೀತಿ ಒತ್ತಡಕ್ಕೂ ಮಣಿಯುವುದಿಲ್ಲ. ಸರ್ಕಾರಿ ಆಸ್ತಿ ಉಳಿಸಲು ಸಾರ್ವಜನಿಕರ ಸಹಕಾರ ಅಗತ್ಯ. ಪ್ರತಿಯೊಬ್ಬರೂ ಗ್ರಾಪಂ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net